ನಾಳೆ ಕರ್ನಾಟಕಕ್ಕೆ ಪ್ರಧಾನಿ: ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌   

ತುಮಕೂರಿನ ಹೆಚ್​​ಎಎಲ್​ನ ಬೃಹತ್ ಹೆಲಿಕಾಪ್ಟರ್ ತಯಾರಕಾ ಘಟಕ ಅನ್ನು (HAL Helicopter Factory) ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಫೆ. 6) ಉದ್ಘಾಟನೆ ಮಾಡಲಿದ್ದಾರೆ.

ಈ ಹಿನ್ನೆಲೆ ಖುದ್ದು ಪ್ರಧಾನಿ ಮೋದಿ ಅವರು ಟ್ವಿಟ್ ಮಾಡುವ ಮೂಲಕ ಕರ್ನಾಟಕಕ್ಕೆ ಬರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

‘ನಾಳೆ, ಫೆಬ್ರವರಿ 6 ರಂದು ನಾನು ಕರ್ನಾಟಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಲುಪಿದ ನಂತರ, ನಾನು ಭಾರತ ಇಂಧನ ಸಪ್ತಾಹ 2023ರಲ್ಲಿ ಭಾಗವಹಿಸುತ್ತೇನೆ. ನಂತರ, ನಾನು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ’ ಎಂದು ಟ್ವಿಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!