ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಶಾಲಾ ಪ್ರಿನ್ಸಿಪಾಲ್ ಬಿದ್ದಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಬಸವೇಶ್ವರ ಬಾಲಕರ ಪ್ರೌಢ ಶಾಲೆಯ ಪ್ರಿನ್ಸಿಪಾಲ್ ನಾರಾಯಣ್ ಎಂಬುವರು 9ನೇ ತರಗತಿ ವಿದ್ಯಾರ್ಥಿನಿ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಅಲ್ಲದೇ ವರ್ಗಾವಣೆ ಪತ್ರ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ಹಿನ್ನಲೆಯಲ್ಲಿ ಪ್ರಿನ್ಸಿಪಾಲ್ ನಾರಾಯಣ್ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಲೋಕಾಯುಕ್ತ ಪೊಲೀಸರ ಸೂಚನೆಯ ಮೇರೆಗೆ ದಿವ್ಯಾ ಎಂಬುವರು ಪ್ರಿನ್ಸಿಪಾಲ್ ನಾರಾಯಣಗೆ ಐದು ಸಾವಿರ ಲಂಚದ ಹಣ ನೀಡಿದರು. ಈ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಸವೇಶ್ವರ ಬಾಲಕ ಪ್ರೌಢ ಶಾಲೆಯ ಪ್ರಿನ್ಸಿಪಾಲ್ ನಾರಾಯಣ್ ಎಂಬುವರನ್ನು ಹಿಡಿದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಇದೀಗ ಬಸವೇಶ್ವರ ಫ್ರೌಢ ಶಾಲೆಯ ಪ್ರಿನ್ಸಿಪಾಲ್ ನಾರಾಯಣ್ ಎಂಬುವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.