ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಶಿರಸಿ ರಾಜ್ಯ ಹೆದ್ದಾರಿಯ ನಂದಿಪುರ ಗ್ರಾಮದ ಹತ್ತಿರ ಖಾಸಗಿ ಬಸ್ ಮತ್ತು ಕೆಎಸ್ ಆರ್ ಟಿಸಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಖಾಸಗಿ ಬಸ್ ಶಿರಸಿ ಕಡೆಯಿಂದ ಕಾತೂರ ಮಾರ್ಗವಾಗಿ ಬರುತ್ತಿತ್ತು. ಕೆಎಸ್ಆರ್ ಟಿಸಿ ಬಸ್ ಮುಂಡಗೋಡದಿಂದ ಶಿರಸಿ ಕಡೆ ಹೋಗುತ್ತಿದ್ದ ವೇಳೆ ನಂದಿಪುರ ಗ್ರಾಮದ ಹತ್ತಿರ ಎರಡು ಬಸ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಇಪ್ಪತ್ತಕ್ಕೂ ಹೆಚ್ವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗಳುಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಬೀರ ಗಾಯಗೊಂಡಿರುವವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ. ಕೆಎಸ್ ಆರ್ ಟಿಸಿನಲ್ಲಿರುವ ಪ್ರಯಾಣಿಕರಿಗೆ ಹೆಚ್ಚು ಗಾಯವಾಗಿದ್ದು, ಒಳ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ. ಘಟನಾ ಸ್ಥಳಕ್ಕೆ ಇಲ್ಲಿನ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.