January16, 2026
Friday, January 16, 2026
spot_img

‘ನನ್ನೊಟ್ಟಿಗೆ ಬಂದ್ರೆ ಫುಲ್ ಮಾರ್ಕ್ಸ್’ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಖಾಸಗಿ ಕಾಲೇಜು HoD ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ತಿಲಕನಗರದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕಾಲೇಜಿನ HoD ಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತನನ್ನು ಸಂಜೀವ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ.

ಪೋಲೀಸ್ ವರದಿಯ ಪ್ರಕಾರ, ಅಕ್ಟೋಬರ್ 2 ರಂದು ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಮನೆಯವರ ಜೊತೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಆದರೆ, ವಿದ್ಯಾರ್ಥಿನಿ ಅವರ ಮನೆಗೆ ತೆರಳಿದಾಗ ಮೊಂಡಲ್ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಆ ಬಳಿಕ ಅವರು ವಿದ್ಯಾರ್ಥಿನಿಗೆ ಉಟ ನೀಡಿದ್ದಾರೆ. ಆದರೆ, ಮೊಂಡಲ್ ಒಬ್ಬರೇ ಇದ್ದುದರಿಂದ ಇರಿಸುಮುರಿಸಿಗೆ ಒಳಗಾದ ವಿದ್ಯಾರ್ಥಿನಿ ತಾನು ಹೊರಡುವುದಾಗಿ ಹೇಳಿದ್ದಾಳೆ.

ಆಗ ಎಚ್​​ಒಡಿ, ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಇದರಿಂದ ವಿದ್ಯಾರ್ಥಿನಿ ಹೆದರಿಕೊಂಡು ತಕ್ಷಣ ಸ್ನೇಹಿತೆಯ ಕರೆ ಎಂಬ ನೆಪ ಹೇಳಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.

ನಂತರ ಅವರು ಪೋಷಕರಿಗೆ ವಿಷಯ ತಿಳಿಸಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದರು. ಪೊಲೀಸ್ ಅಧಿಕಾರಿಗಳು ಪ್ರಕರಣದ ಆಧಾರದ ಮೇಲೆ ಸಂಜೀವ್ ಕುಮಾರ್ ಮಂಡಲ್ ಅವರನ್ನು ಬಂಧಿಸಿ, ತನಿಖೆ ಮುಂದುವರೆಸುತ್ತಿದ್ದಾರೆ.

Must Read

error: Content is protected !!