ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕನ್ನಡ ಮಾತನಾಡವರ ಸಂಖ್ಯೆ ಹೆಚ್ಚಾಗುತ್ತಿದೆ, ಕನ್ನಡ ಕಲಿಯಿರಿ ಎಂದು ಯಾರೇ ಸಲಹೆ ನೀಡಿದರೂ ಗರಂ ಆಗುತ್ತಿದ್ದಾರೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ ಅರ್ಬನ್ ಎನ್ನುವ ಕಂಪನಿಯ ಸಿಬ್ಬಂದಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಬಾತ್ರೂಮ್ ಸ್ಪಚ್ಚಗೊಳಿಸದೇ ಹಾಗೇ ಹೋಗಿದ್ದಾರೆ.
ಹೌದು, ಅರ್ಬನ್ ಕಂಪನಿಯು ಮನೆಗೆಲಸ, ಕ್ಲೀನಿಂಗ್, ಇನ್ನಿತರ ಕೆಲಸಗಳನ್ನು ಮಾಡುತ್ತದೆ. ಬುಕ್ ಮಾಡಿದರೆ ಸಿಬ್ಬಂದಿ ಮನೆಗೆ ಬಂದು ಎಲ್ಲವನ್ನೂ ಕ್ಲೀನ್ ಮಾಡಿ ಹೋಗುತ್ತಾರೆ. ಬಾತ್‌ರೂಮ್ ತೊಳೆಯುವಾಗ ಕನ್ನಡ ಮಾತನಾಡಿ ಎಂದಿದ್ದಕ್ಕೆ ಅರ್ಬನ್‌ನ ಸಿಬ್ಬಂದಿಯೊಬ್ಬ ಒಪ್ಪಿಕೊಂಡಿದ್ದ ಕೆಲಸ ಬಿಟ್ಟು ಹಾಗೇ ಹೋಗಿದ್ದಾನೆ.
ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅರ್ಬನ್ ಕಂಪನಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾತ್ರೂಮ್ ಸ್ಪಚ್ಚಗೊಳಿಸಲು ಬುಕ್ ಮಾಡಿದ್ದ ಅವರು, ಇಬ್ಬರು ಕೆಲಸಗಾರರು ಆಗಮಿಸಿದ್ದಾರೆ. ಹೀಗೆ ಬಂದ ಇಬ್ಬರು ಕೆಲಸಗಾರರ ಪೈಕಿ ಓರ್ವ ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ಇದು ಆ ನಿವಾಸಿಗೆ ಇರುಸುಮುರುಸು ತಂದಿದೆ. ಹೀಗಾಗಿ ಕನ್ನಡದಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ. ಆದರೂ ಕೆಲಸಗಾರರು ಅವರಿಗೆ ಬಂದ ಭಾಷೆಯಲ್ಲೇ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
Today I learned that knowing a particular language might be necessary even to get basic services like bathroom cleaning in my own home. Thanks for the lesson, @urbancompany_UC@UC_Assist
I had booked a bathroom cleaning service via Urban Company. Two people arrived, and I showed…
— ಕಣಾದ (@Metikurke) March 23, 2025