February 8, 2026
Sunday, February 8, 2026
spot_img

ವಿಜಯಪುರದಲ್ಲಿ ಖಾಸಗಿ ಜೆಟ್‌ ಪತನ; ಇಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ವರದಿ,ವಿಜಯಪುರ:

ಜೆಟ್ ವಿಮಾನವೊಂದು ನೆಲಕಚ್ಚಿ, ವಿಮಾ‌ನದಲ್ಲಿದ್ದ ಪೈಲಟ್ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ
ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಜಮೀನಿನಲ್ಲಿ ನಡೆದಿದೆ.

ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಜೆಟ್ ವಿಮಾನದ
ತೈಲ ಖಾಲಿಯಾದ ಕಾರಣ ಏಕಾಏಕಿ ಧರೆಗೆ ಉರುಳಿದ್ದು, ಸೆಸ್ನಾ 172 ಟ್ಯಾಂಗೋ ಚಾರ್ಲಿ ಎಂಬ ರೆಡ್ ಬರ್ಡ್ ಪ್ರೈವೇಟ್ ಜೆಟ್ ವಿಮಾನ ಇದಾಗಿದೆ. ಆದರೆ, ಯಾವುದೆ ಪ್ರಾಣಾಪಾಯವಾಗಿಲ್ಲ.

ಖಾಸಗಿ ಜೆಟ್ ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !