ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ವಡೋದರಾದ ಖಾಸಗಿ ಶಾಲೆಯೊಂದರ ಗೋಡೆ ಕುಸಿದಿವೆ. ಈ ಘಟನೆಯ ಸುತ್ತಲಿನ ಭಯಾನಕ ದೃಶ್ಯವು ಕಣ್ಗಾವಲು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗೋಡೆಯ ಕುಸಿತದಿಂದ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ವಡೋದರಾದ ವಘೋಡಿಯಾ ರಸ್ತೆ ಬಳಿಯ ಶ್ರೀ ನಾರಾಯಣ ಖಾಸಗಿ ಶಾಲೆಯ ಮೊದಲ ಮಹಡಿಯಲ್ಲಿ ತರಗತಿಯ ಗೋಡೆ ಕುಸಿದಿದೆ. ಘಟನೆಯ ವರದಿಯನ್ನು ಸ್ವೀಕರಿಸಿದ ಅಗ್ನಿಶಾಮಕ ದಳದವರು ಅಪಘಾತದ ಸ್ಥಳಕ್ಕೆ ತಕ್ಷಣ ಆಗಮಿಸಿ ಪರಿಶೀಲನೆ ನಡೆಸಿದರು.
“ದೊಡ್ಡ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದೆವು. ವಿದ್ಯಾರ್ಥಿಯೊಬ್ಬನ ತಲೆಗೆ ಗಾಯವಾಗಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ” ಎಂದು ಶಾಲಾ ಪ್ರಾಂಶುಪಾಲ ರೂಪಲ್ ಶಾ ತಿಳಿಸಿದ್ದಾರೆ.
गुजरात के वडोदरा में पलक झपकते दीवार भरभरा कर गिर पड़ी. कई बच्चे गंभीर रूप से घायल हैं. pic.twitter.com/BSMBzPd27n
— Gagandeep Singh (@GagandeepNews) July 20, 2024