ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಊರ್ವಶಿ ರೌಟೇಲಾ ಅವರ ಖಾಸಗಿ ವಿಡಿಯೊವೊಂದು ವೈರಲ್ ಆಗಿದ್ದು, ನಟಿ ಬಾತ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿರುವುದನ್ನು ಕಂಡು ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಾರೆ.
‘ಸೋರಿಕೆಯಾದ’ ಬಾತ್ರೂಮ್ ವೀಡಿಯೊ ತನ್ನ ಮುಂಬರುವ ʻಘುಸ್ಪೈತಿಯೇʼ ಸಿನಿಮಾದ ದೃಶ್ಯ ಎಂದು ಹೇಳಿದ್ದಾರೆ. ತನ್ನ ಚಿತ್ರದದ್ದಾದರೂ, ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಅಸಮಾಧಾನಗೊಂಡಿದ್ದಾರೆ.
‘ಕ್ಲಿಪ್ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ಘುಸ್ಪೈತಿಯೇ ಚಲನಚಿತ್ರದ ಭಾಗವಾಗಿದೆ’ ಎಂದರು. ಘುಸ್ಪೈತಿಯೇ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.
ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು.