ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಜೈಲಿನಿಂದಲೇ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಆಗಾಗ ಪ್ರೇಮಪತ್ರಗಳನ್ನು ಬರೆಯೋದು, ವಾಟ್ಸಾಪ್ ಸಂದೇಶಗಳನ್ನು ಕಳಿಸೋದು ಮಾಡ್ತಿದ್ದಾರೆ ಎನ್ನುವ ಆರೋಪ ಇದೆ.
ಇದನ್ನು ನಾನು ಮಾಡಿಲ್ಲ ಎಂದು ಸುಖೇಶ್ ವಾದ ಮಾಡ್ತಿದ್ದಾರೆ. ಜೈಲಿನಿಂದ ವಾಟ್ಸಾಪ್ ಮೆಸೇಜ್ ಮಾಡೋದು ಅಸಾಧ್ಯ ಎಂದು ಸುಖೇಶ್ ಹೇಳಿದ್ದಾರೆ. ಈ ಪ್ರಕರಣದಿಂದ ತನ್ನ ಹೆಸರನ್ನು ಕೈಬಿಡುವಂತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ನಾನು ಯಾವ ಪತ್ರವನ್ನೂ ಬರೆದಿಲ್ಲ, ಯಾವ ಸಂದೇಶವನ್ನೂ ಕಳಿಸಿಲ್ಲ. ಸುಮ್ಮನೆ ನನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ ನಿನ್ನ ನಿಜ ಬಣ್ಣ ಬಯಲು ಮಾಡಬೇಕಾಗುತ್ತದೆ ಎಂದು ಸುಖೇಶ್ ಹೇಳಿದ್ದರು. ಇದೀಗ ಮತ್ತೆ ಮುಂದುವರಿದರೆ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಸುಖೇಶ್ ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜಾಕ್ವೆಲಿನ್ ಅಥವಾ ಸುಖೇಶ್ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ನನ್ನ ಹೆಸರನ್ನು ಬಳಸದಂತೆ, ನನ್ನ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡದಂತೆ ತಡೆ ನೀಡಿ ಎಂದು ಜಾಕ್ವೆಲಿನ್ ಮನವಿ ಮಾಡಿದ್ದಾರೆ.