August 4, 2026
Tuesday, August 4, 2026
spot_img

‘ಹೇರಾ ಫೇರಿ 3’ ಚಿತ್ರದಿಂದ ಪ್ರಿಯದರ್ಶನ್ ಔಟ್; ನಿರ್ಮಾಪಕನ ವಿರುದ್ಧ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಮಿಡಿ ಚಿತ್ರಗಳ ರಾಜ ‘ಹೇರಾ ಫೇರಿ 3’ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಚಿತ್ರದ ನಿರ್ದೇಶನದಿಂದ ಹಿರಿಯ ನಿರ್ದೇಶಕ ಪ್ರಿಯದರ್ಶನ್ ಹೊರನಡೆದಿದ್ದು, ಸದ್ಯದ ಕಾನೂನು ಸಂಘರ್ಷಗಳಿಂದಾಗಿ ಈ ಸಿನಿಮಾ ಚಿತ್ರಮಂದಿರಕ್ಕೆ ಬರುವುದು ಅನುಮಾನ ಎಂದು ಹೇಳಿದ್ದಾರೆ.

ನಿರ್ಮಾಪಕ ಫಿರೋಜ್ ವಿರುದ್ಧ ಗಂಭೀರ ಆರೋಪ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯದರ್ಶನ್, ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಪ್ರಿಯದರ್ಶನ್ ಜೊತೆ ಎಂದಿಗೂ ‘ಹೇರಾ ಫೇರಿ 3’ ಮಾಡಬೇಡಿ ಎಂದು ಫಿರೋಜ್ ಅವರು ನಟ ಅಕ್ಷಯ್ ಕುಮಾರ್‌ಗೆ ಹೇಳಿದ್ದರು. ಅಷ್ಟೇ ಅಲ್ಲದೆ, ಮೊದಲ ಭಾಗದ ನನ್ನ ಎಡಿಟಿಂಗ್ ಕಳಪೆಯಾಗಿತ್ತು ಎಂದು ಟೀಕಿಸಿ, ತಾವು 5 ಗಂಟೆಯ ಸಿನಿಮಾವನ್ನು ಎಡಿಟ್ ಮಾಡಿದ್ದಾಗಿ ಸುಳ್ಳು ಹೇಳಿಕೊಂಡಿದ್ದಾರೆ” ಎಂದು ಪ್ರಿಯದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟರ ಆಸೆಗೂ ಎದುರಾಯ್ತು ಕಾನೂನು ತೊಡಕು

ಈ ಫ್ರಾಂಚೈಸಿಯನ್ನು ದೇಶದ ಅತಿ ದೊಡ್ಡ ಸಿನಿಮಾವನ್ನಾಗಿ ಮಾಡುವ ಕನಸು ಪ್ರಿಯದರ್ಶನ್ ಅವರಿಗಿತ್ತು. ಸೂಪರ್ ಸ್ಟಾರ್‌ಗಳಾದ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ವಿಶೇಷ ಕೋರಿಕೆಯ ಮೇರೆಗೆ ಅವರು ಮೂರನೇ ಭಾಗವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಚಿತ್ರದ ಕಥೆ ಕೇಳಿ ನಟರೆಲ್ಲರೂ ಫುಲ್ ಕನೆಕ್ಟ್ ಆಗಿದ್ದರು.

ಪ್ರಿಯದರ್ಶನ್ ಮಾತು: “ನಾನು ಚಿತ್ರದಲ್ಲಿದ್ದೇನಾ ಇಲ್ಲವಾ ಎನ್ನುವುದು ಮುಖ್ಯವಲ್ಲ. ಆದರೆ ಈಗಿರುವ ಕಾನೂನು ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ನೋಡಿದರೆ ‘ಹೇರಾ ಫೇರಿ 3’ ಸಿನಿಮಾ ಸೆಟ್ಟೇರುವುದು ಮತ್ತು ಥಿಯೇಟರ್‌ಗೆ ಬರುವುದು ತೀರಾ ಕಷ್ಟ.”

ಈ ಬೆಳವಣಿಗೆಯಿಂದಾಗಿ ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಸೀಕ್ವೆಲ್ ಭವಿಷ್ಯ ಈಗ ಸಂಪೂರ್ಣವಾಗಿ ಮಸುಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !