January17, 2026
Saturday, January 17, 2026
spot_img

ಕಾಂಗ್ರೆಸ್ ನಲ್ಲಿ ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ಖರ್ಗೆ ನಂ.1: ಛಲವಾದಿ ನಾರಾಯಣಸ್ವಾಮಿ ಕಿಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಡೀ ಕಾಂಗ್ರೆಸ್ಸಿನಲ್ಲಿ ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ಖರ್ಗೆಯವರು ನಂಬರ್ 1 ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗುಡುಗಿದ್ದಾರೆ.

ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ವಂಶಪಾರಂಪರ್ಯದಲ್ಲಿ ಆ ರಾಜಮನೆತನದ ಆಡಳಿತವೇ ಮತ್ತೆ ಬಂದ ಹಾಗೆ ಕಾಣುತ್ತಿದೆ ಎಂದು ಟೀಕಿಸಿದರು.

ಪ್ರಿಯಾಂಕ್ ಖರ್ಗೆಯವರು ಸದನದಲ್ಲಿ ಉತ್ತರ ಕೊಡಬೇಕಾದ ವೇಳೆ ಪರಾರಿಯಾಗುತ್ತಾರೆ. ಅವರ ಸಾಧನೆ ಶೂನ್ಯವಾದುದೇ ಇದಕ್ಕೆ ಕಾರಣ. ಖರ್ಗೆ ಎಂಬ ಹೆಸರು ಪ್ರಿಯಾಂಕ್ ಪಕ್ಕದಲ್ಲಿ ಇಲ್ಲದೇ ಇರುತ್ತಿದ್ದರೆ ಅವರು ಮಂಡಲ ಪಂಚಾಯತ್ ಸದಸ್ಯರೂ ಆಗುತ್ತಿರಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗಿದ್ದಾರೆ.

Must Read

error: Content is protected !!