October 18, 2026
Sunday, October 18, 2026
spot_img

ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್‌ ಮೂಲದ ಯುವತಿ ಆತ್ಮಹತ್ಯೆಗೆ ಶರಣು, ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಗಾಲ್ಯಾಂಡ್‌ನ ಯುವತಿಯೊಬ್ಬರು ಚಿಕ್ಕಮಗಳೂರು ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅರವಿಂದ ನಗರದ ಮನೆಯಲ್ಲಿ ಯುವತಿ ಲಿನ್ಸುಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಡೈರಿಯಲ್ಲಿ ರಾಜೇಶ್‌ ಹಾಗೂ ತೇಜಸ್‌ ಎನ್ನುವವರ ಹೆಸರನ್ನು ಲಿನ್ಸುಲಾ ಬರೆದಿದ್ದಾರೆ.

ಆತ್ಮಹತ್ಯೆಗೆ ಶರಣಾಗುವ ಮುನ್ನ ಕಿವಿಶೆ ಕಿನಿಮಿ ಎಂಬವರ ಜೊತೆ ಅರ್ಧ ಗಂಟೆ ಮಾತನಾಡಿದ್ದರು ಎಂದು ತಿಳಿದುಬಂದಿದೆ. ಲಿನ್ಸುಲಾಳಿಗೆ ರಾಜೇಶ್ ಹಾಗೂ ತೇಜಸ್ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲಶಿಲಾ ಇಂಚುಗರ್ ಎಂಬವರು ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Must Read