ಹೊಸದಿಗಂತ ವರದಿ, ಕಲಬುರಗಿ:
ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸೂಕ್ತ ಭದ್ರತೆ ನೀಡದ ಕಲಬುರಗಿ ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತ, ಸಂವಿಧಾನದ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದ ಪ್ರವಾಸಿ ಮಂದಿರದಲ್ಲಿ ಐದು ಗಂಟೆಗಳ ಕಾಲ ಪ್ರತಿಪಕ್ಷದ ನಾಯಕನನ್ನು ದಿಗ್ಬಂಧನ ಹೇರಿ,ಅವರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು,ಜಿಲ್ಲಾ ಪೋಲಿಸ್ ಆಡಳಿತ ಏನು ಮಾಡುತ್ತಿತ್ತು.೨೦೦ಕ್ಕೂ ಅಧಿಕ ಪೋಲಿಸ್ ಪಡೆಯಿದ್ದರು,ರಕ್ಷಣೆ ನೀಡವಲ್ಲಿ ವಿಫಲಗೊಂಡಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸರ್ವಾಧಿಕಾರಿ ಧೋರಣೆ ಯಾವ ಮಟ್ಟಕ್ಕಿದೆ ಎಂದರೆ,ರಜಾಕಾರರು ಹೇಗೆ ಆಡಳಿತ ನಡೆಸಿ,ಹತ್ತಿಕ್ಕುವ ಕೆಲಸ ಮಾಡುತ್ತಿದ್ದರೋ,ಅದೇ ಮಾದರಿಯಲ್ಲಿ ಸಚಿವ ಖರ್ಗೆಯವರ ಕಾರ್ಯ ವೈಖರಿ ಪ್ರದರ್ಶನವಾಗಿದೆ.ನಾನೊಬ್ಬನೇ ದಲಿತ ಎಂಬ ಭಾವನೆ ಸಚಿವ ಪ್ರಿಯಾಂಕ್ ಖರ್ಗೆ ಬಳಿಯಿದ್ದು, ಖರ್ಗೆಯೊಬ್ಬ ಬಲಿತ ದಲಿತರಾಗಿದ್ದು,ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಡ ದಲಿತ ಎಂದು ಹೇಳಿದರು.