ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆ ಹೆಸರು: ಸಚಿವರ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೆನ್‌ಡ್ರೈವ್‌ ಪ್ರಕರಣದ ಹಿಂದೆ ನಾಲ್ವರು ಸಚಿವರು ಇದ್ದಾರೆ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅಲ್ಲಗೆಳೆದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವರು, ದೇವರಾಜೇಗೌಡ (Devaraje Gowda) ಅವರ ಆರೋಪಗಳೆಲ್ಲ ಸುಳ್ಳು. ಯಾರಾದರೂ ಜಾಸ್ತಿ ಮಾತಾಡಿದ್ರೆ ಅವರ ಮೇಲೆ ಗೂಬೆ ಕೂರಿಸೋದು ಬಿಜೆಪಿಯ ಹಳೆ ಚಾಳಿ. ಈ ಹಿಂದೆ ಬಿಟ್‌ ಕಾಯಿನ್‌ನಲ್ಲಿ, ಪಿಎಸ್‌ಐ ಹಗರಣ, ಗಂಗಾ ಕಲ್ಯಾಣ ಹಗರಣದಲ್ಲಿ ಪ್ರಿಕಾಂಕ್‌ ಖರ್ಗೆ ಪಾಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಇದನ್ನೂ ಹಂಗೇ ಹೇಳಿರೋದು. ಯಾರಿಗೆ ಗೊತ್ತು ಮೇಲಿಂದಲೇ ಹೇಳಿಸಿರಬಹುದು ಎಂದು ವಾಗ್ದಾಳಿ ನಡೆಸಿದರು.

ದೇವರಾಜೇಗೌಡ ಅವರೇ ಅಮಿತ್‌ ಶಾಅವರ ನಿರ್ದೇಶನದ ಮೇರೆಗೆ ನಾನು ಇದನ್ನೆಲ್ಲಾ ಮಾಡಿರುವುದು ಅಂತಾ ಈಗಾಗಲೇ ಹೇಳಿದ್ದಾರೆ. ಇದನ್ನೂ ಅವರೇ ಹೇಳಿಸಿರಬಹುದು. ಆದರೆ ಇದನ್ನು ಕೋರ್ಟ್‌ ಆವರಣದಲ್ಲಿ ಹೇಳುವ ಅವಶ್ಯಕತೆ ಏನಿದೆ?. ಲಾಯರ್ ಆಗಿರುವ ನೀವು ಬಂದು ಎಲ್ಲಾ ದಾಖಲೆಗಳನ್ನು ನೀಡಿ. ನಿಮಗೆ ಸಂಪೂರ್ಣವಾಗಿ ಕಾನೂನಿನ ಅರಿವಿದೆ. ಸಚಿವರಾಗಿರುವ ನಮಗೆ ಬೇರೆ ಕೆಲಸ ಇಲ್ವಾ?. ರಾಜ್ಯದಲ್ಲಿ ಭೀಕರ ಬರಗಾಲವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!