ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋಕಸಭೆಯಲ್ಲಿ ತಮ್ಮ ಮೊಟ್ಟ ಮೊದಲ ಭಾಷಣ ಮಾಡಿದರು.
ನಮ್ಮ ದೇಶಕ್ಕೆ ಚರ್ಚೆ ಮತ್ತು ಸಂವಾದದ ವಿಷಯದಲ್ಲಿ ಸಾವಿರಾರು ವರ್ಷಗಳ ಹಳೆಯ ಸಂಸ್ಕೃತಿ ಇದೆ. ವಿವಿಧ ಧರ್ಮಗಳಲ್ಲಿಯೂ ಚರ್ಚೆ, ಮಾತುಕತೆ ಮತ್ತು ಸಂವಾದದ ಸಂಸ್ಕೃತಿ ಇದೆ. ನಮ್ಮ ಸ್ವಾತಂತ್ರ್ಯ ಹೋರಾಟವು ಈ ಸಂಪ್ರದಾಯದಿಂದ ಹೊರಹೊಮ್ಮಿತು. ನಮ್ಮ ಸ್ವಾತಂತ್ರ್ಯ ಹೋರಾಟವು ಅಹಿಂಸೆ ಮತ್ತು ಸತ್ಯವನ್ನು ಆಧರಿಸಿದ ವಿಶಿಷ್ಟ ಹೋರಾಟವಾಗಿದೆ ಎಂದು ಹೇಳಿದರು.
ಬಾಲ್ಯದಲ್ಲಿ ನಾವು ಕಥೆ ಕೇಳುತ್ತಿದ್ದೆವು. ಹಿಂದೆ ರಾಜ ವೇಷ ಬದಲಿಸಿ ಜನರ ನಡುವೆ ಅಭಿಪ್ರಾಯ ಕೇಳಲು ಹೋಗುತ್ತಿದ್ದ. ಪ್ರಜೆಗಳು ನನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ. ನಾನು ಸರಿಯಾದ ದಾರಿಯಲ್ಲಿದ್ದೇನೆಯೇ, ಇಲ್ವಾ ಅಂತಾ ತಿಳಿಯಲು. ಇಂದಿನ ರಾಜ ವೇಷ ಬದಲಿಸುತ್ತಿದ್ದಾರೆ. ಅವರಿಗೆ ವೇಷ ಬದಲಿಸುವ ಹವ್ಯಾಸ ಇದೆ. ಆದರೆ, ಅವರಿಗೆ ಜನರು ನಡುವೆ ಹೋಗುವ ಧೈರ್ಯ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಸಂವಿಧಾನ ಸುರಕ್ಷಾ ಕವಚ. ನ್ಯಾಯ, ಸುರಕ್ಷೆ, ಅಭಿವ್ಯಕ್ತಿಯ ಕವಚ. ಸುರಕ್ಷಾ ಕವಚವನ್ನು ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಲ್ಯಾಟರಲ್ ಎಂಟ್ರಿ ಮೂಲಕ ಮೀಸಲಾತಿ ಮುಗಿಸಲು ನೋಡುತ್ತಿದೆ. ಸಂವಿದಾನ ಬದಲಾಯಿಸುವ ಮಾತುಗಳು ದೇಶದಲ್ಲಿ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ ಅದು ಗೊತ್ತಾಗಿದೆ. ಅದಕ್ಕೆ ಬಿಜೆಪಿ ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.
ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ದೇಶದ ಕಾನೂನುಗಳು ಉದ್ಯೋಗಪತಿಗಳಿಗೆ ಮಾಡಲಾಗಿದೆ. ಓರ್ವ ವ್ಯಕ್ತಿಗಾಗಿ ಎಲ್ಲವನ್ನು ಬದಲಿಸಲಾಗುತ್ತಿದೆ. ಅದಾನಿಗೆ ಎಲ್ಲಾ ಕೋಲ್ಡ್ ಸ್ಟೋರೇಜ್ ಕೊಡಲಾಗಿದೆ. ಎಲ್ಲಾ ಅವಕಾಶಗಳನ್ನು ಓರ್ವ ವ್ಯಕ್ತಿಗೆ ನೀಡಲಾಗುತ್ತಿದೆ. ಬಡವರು ಬಡವರಾಗಿದ್ದಾರೆ, ಶ್ರೀಮಂತರು ಶ್ರೀಮಂತರಾಗೇ ಹೋಗುತ್ತಿದ್ದಾರೆ. ಹಿಂದೆ ಏನ್ ಮಾಡಿದ್ರು ಅನ್ನೋ ಚರ್ಚೆ ಮಾಡ್ತಾರೆ. ಬ್ಯಾಲೆಟ್ ಪೇಪರ್‌ನಲ್ಲಿಯೇ ಚುನಾವಣೆ ಮಾಡಿ. ಹಾಲು, ನೀರು ಏನ್ ಅನ್ನೋದು ಗೊತ್ತಾಗುತ್ತೆ. ಜನರು ಸಾಂವಿಧಾನಿಕವಾಗಿ ಆಯ್ಕೆ ಮಾಡಿದ ಸರ್ಕಾರ ಕೆಡುವುದು ಸರಿಯೇ? ಇದು ಸಂವಿಧಾನ ನಡೆಯೇ ಎಂದು ಕೇಳಿದ್ದಾರೆ.
ಬಹಳಷ್ಟು ಜನರು ಇಲ್ಲಿ ಕೂರುತ್ತಿದ್ದರು. ಈಗ ಅಲ್ಲಿ ಕೂರುತ್ತಿದ್ದಾರೆ. ವಾಷಿಂಗ್ ಮಷಿನ್‌ನಲ್ಲಿ ತೊಳೆದ ಮೇಲೆ ಅವರು ಅಲ್ಲೂ ಕಾಣ್ತಿಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಸತ್ಯ ಮಾತನಾಡುವವರನ್ನು ಬೆದರಿಸಲಾಗುತ್ತಿದೆ. ಇಡಿ, ಸಿಬಿಐ, ಐಟಿ ಮೂಲಕ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಗಾಂಧಿ ವಿಚಾರಧಾರೆಯಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದವರು ವಿರೋಧ ಪಕ್ಷದಲ್ಲಿದ್ದಾರೆ. ಭಯದಿಂದ ಬ್ರಿಟಿಷರ ಜೊತೆಗೆ ಸೇರಿದವರು ಆಡಳಿತದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಈ ದೇಶದ ಭಯ ಅಲ್ಲ, ಸಾಹಸ ಮತ್ತು ಸಂಘರ್ಷದಿಂದಾಗಿದೆ. ಸಂವಿಧಾನ ಈ ಸಂಘರ್ಷಕ್ಕೆ ಶಕ್ತಿ ಕೊಡುತ್ತದೆ. ಈ ದೇಶ ಭಯದಿಂದಲ್ಲ, ಸಾಹಸದಿಂದಲೇ ನಡೆಯುತ್ತದೆ. ಭಯಭೀತರ ಕೈಯಲ್ಲಿ ಈ ದೇಶ ಹೆಚ್ಚು ದಿನ ಇರುವುದಿಲ್ಲ. ಈ ದೇಶ ಹೋರಾಡುತ್ತದೆ, ಸತ್ಯವನ್ನು ಕೇಳುತ್ತದೆ ಎಂದು ತಿಳಿಸಿದ್ದಾರೆ.