ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತ್ ಜೋಡೋ ಯಾತ್ರೆಯಲ್ಲಿ ಸೋಮವಾರ ಮಹಿಳಾ ಸಬಲೀಕರಣದ ಸಂದೇಶವನ್ನು ಸಾರಲಾಗುತ್ತಿದೆ. ಬುಂದಿ ಜಿಲ್ಲೆಯಿಂದ ಆರಂಭಗೊಂಡ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಅವರ ಪತಿ ರಾಬರ್ಟ್ ವಾದ್ರಾ ಮತ್ತು ನೂರಾರು ಮಹಿಳೆಯರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆಹಾಕಿದ್ದಾರೆ.
ಬುಂದಿ ಜಿಲ್ಲೆಯ ಬಾಬಾಯಿಯಲ್ಲಿರುವ ತೇಜಾಜಿ ಮಹಾರಾಜ್ ಮಂಡಿಯಿಂದ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆರಂಭಗೊಂಡ ಮೆರವಣಿಗೆಯನ್ನು ʼನಾರಿ ಶಕ್ತಿʼ ಪಾದ ಯಾತ್ರೆ ಎಂದು ಕರೆಯಲಾಗುತ್ತಿದೆ.
ಸುತ್ತಲಿನ ಪ್ರದೇಶಗಳ ಪಕ್ಷದ ಕಾರ್ಯಕರ್ತರು ಮತ್ತು ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಹಿಳಾ ಕಾರ್ಯಕರ್ತರು ಇಂದಿನ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಪ್ರಿಯಾಂಕಾ ಗಾಂಧಿ ಮತ್ತು ಇತರ ಯಾತ್ರಿಗಳೊಂದಿಗೆ ಕೋಟಾ-ಲಾಲ್ಸೋಟ್ ಮೆಗಾ ಹೆದ್ದಾರಿಯಲ್ಲಿ ಬಾಬಾಯಿ ಪ್ರದೇಶದಿಂದ ಸ್ವೈಮಾಧೋಪುರ ಜಿಲ್ಲೆಯ ಪಿಪಾಲ್ವಾಡಕ್ಕೆ ಮೆರವಣಿಗೆ ನಡೆಸಲಿದ್ದಾರೆ.
ಸೋಮವಾರ ರಾಜಸ್ಥಾನದಲ್ಲಿ ಯಾತ್ರೆಯ ಏಳನೇ ದಿನವಾಗಿದೆ. ಇದು ಬುಂದಿ ಜಿಲ್ಲೆಯಲ್ಲಿ ಯಾತ್ರೆಯ ಕೊನೆಯ ದಿನವೂ ಆಗಿದೆ. ತೇಜಾಜಿ ದೇವಸ್ಥಾನದಿಂದ ಸುಮಾರು 6 ಕಿ.ಮೀ ವರೆಗೆ ಮೆರವಣಿಗೆ ನಡೆಸಿದ ನಂತರ, ಯಾತ್ರೆಯು ಸುಮಾರು 7.15 ಕ್ಕೆ ಟೋಂಕ್ ಜಿಲ್ಲೆಯನ್ನು ಪ್ರವೇಶಿಸಿತು ಮತ್ತು ಟೋಂಕ್‌ನಲ್ಲಿ ಸುಮಾರು 5 ಕಿಲೋಮೀಟರ್‌ಗಳಷ್ಟು ಸಾಗಿ ಪಿಪಾಲ್ವಾಡ ಮೂಲಕ ಸ್ವೈಮಾಧೋಪುರವನ್ನು ಪ್ರವೇಶಿಸುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ