ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಿಯಾಂಶ್ ಆರ್ಯಾ ಶತಕದ ಏಕಾಂಗಿ ಹೋರಾಟಕ್ಕೆ ಚೆನ್ನೈ ಬೌಲರ್ಸ್ ಕಂಗಾಲಾಗಿ ಹೋಗಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ತಂಡ 219 ರನ್ ಕಲೆಹಾಕಿತು. ಆ ಮೂಲಕ ಸಿಎಸ್‌ಕೆ ಗೆಲುವಿಗೆ 220 ರನ್ ಟಾರ್ಗೆಟ್ ಸೆಟ್ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಆರಂಭಿಕ ಆಟಗಾರ, ಪ್ರಭ್‌ಸಿಮ್ರಾನ್ ಖಾತೆ ತೆರೆಯದೆ ಫೆವಿಲಿಯನ್ ಸೇರಿಕೊಂಡರು. ನಂತರ ಬಂದ ಶ್ರೇಯಸ್ ಅಯ್ಯರ್ 9, ಮಾರ್ಕಸ್ ಸ್ಟೋಯಿನಸ್ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.ಬಳಿಕ ಬಂದ ನೆಹಾಲ್ ವಡೇರಾ 9, ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಒಂದು ಹಂತದಲ್ಲಿ ಪಂಜಾಬ್ 150 ರನ್ ಗಳಿಸುವುದು ಕಷ್ಟ ಎಂಬ ವಾತಾವರಣ ಪಂಜಾಬ್ ಪಾಳಯದಲ್ಲಿ ಉಂಟಾಗಿತ್ತು. ಆದ್ರೆ, ವಿಕೆಟ್ ಬೀಳ್ತಾ ಇದ್ರೂ ಕೂಡ ಕ್ರೀಸ್ ಕಚ್ಚಿ ನಿಂತಿದ್ದ ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 103 ರನ್ ಗಳಿಸಿದರು.
ಅಂತಿಮವಾಗಿ ಶಶಾಂಕ್ ಸಿಂಗ್ 36 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆಗೆ ಮಾರ್ಕೋ ಯಾನ್ಸನ್ ಕೂಡ 34 ರನ್ ಗಳಿಸಿ ಅಜೇಯಯರಾಗಿ ಉಳಿದುಕೊಂಡರು. ಈ ಮೂವರ ಆಟದ ನೆರವಿನಿಂದ ನಿಗದಿತ 20 ಓವರ್‌ನಲ್ಲಿ 219 ರನ್ ಗಳಿಸಿತು.