ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಖ್ಯಾತ ನಟರು ತಮ್ಮ ಇಷ್ಟದ ಪಕ್ಷಗಳ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ನಟ ಸುದೀಪ್, ಭುವನ್, ಹರ್ಷಿಕಾ ಪೂಣಚ್ಚ ಬಿಜೆಪಿ ಪರ ಮತಯಾಚನೆ ಮಾಡುತ್ತಿದ್ದರೆ, ಇತ್ತ ರಮ್ಯಾ ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿದ್ದಾರೆ. ಈಗಷ್ಟೇ ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ.
ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಶಿವರಾಜ್‌ಕುಮಾರ್ ತಮ್ಮ ನಡೆಯ ಮೂಲಕ ಉತ್ತರ ನೀಡಿದ್ದಾರೆ, ಗೀತಾ ಶಿವರಾಜ್‌ಕುಮಾರ್‌ನನ್ನು ಬೆಂಬಲಿಸಿ ಇದೀಗ ಶಿವರಾಜ್‌ಕುಮಾರ್ ಕೂಡ ಕಾಂಗ್ರೆಸ್ ಬೆಂಬಲಿಸಿದ್ದಾರೆ. ತಾವೂ ಕಾಂಗ್ರೆಸ್ ಪರ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ.