ಹೊಸದಿಗಂತ ಡಿಜಿಟಲ್ ಡೆಸ್ಕ್
ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 9 ರ ಪಂದ್ಯದಲ್ಲಿ ವಿಕಾಶ್ ಕಂಡೋಲರ ಕೊನೆ ಕ್ಷಣದ ʼಜಾದೂʼ ನೆರವಿನಿಂದ ಬೆಂಗಳೂರು ಬುಲ್ಸ್ 37-31 ರಿಂದ ಜೈಪುರ ಪಿಂಕ್ ಪ್ಯಾಂಥರ್ ವಿರುದ್ಧ ಜಯಭೇರಿ ಬಾರಿಸಿತು.
ಪಂದ್ಯದ್ದಕ್ಕೂ ಎರಡೂ ತಂಡಗಳು ನಿಕಟ ಪೈಪೋಟಿ ನಡೆಸಿದವು ಮತ್ತು ಪಂದ್ಯದ ಕೊನೆಯ ನಿಮಿಷದಲ್ಲಿ ಪಂದ್ಯ 30-30 ರಲ್ಲಿ ಸಮಬಲಗೊಂಡಿತ್ತು. ಬೆಂಗಳೂರು ಕೊನೆಯ ರೈಡ್ ನಲ್ಲಿ ವಿಕಾಶ್ ಕಂಡೋಲಾ ʼಸೂಪರ್ ರೈಡ್ʼ ಮಾಡಿ ಪ್ಯಾಂಥರ್ಸ್ ತಂಡವನ್ನು ಆಟೌಟ್ ಮಾಡುಗವ ಮೂಲಕ ಬುಲ್ಸ್ ಗೆ ರೋಚಕ ಗೆಲವು ತಂದುಕೊಟ್ಟರು.
ಪಂದ್ಯದ ಆರಂಭದಲ್ಲಿ ಭರತ್ 7ನೇ ನಿಮಿಷದಲ್ಲಿ ಅದ್ಭುತ ದಾಳಿ ನಡೆಸಿ ಪ್ಯಾಂಥರ್ಸ್ ಅನ್ನು ಆಲ್ ಔಟ್ ಮಾಡಲು ಸಹಾಯ ಮಾಡಿ 10-3ರಲ್ಲಿ ಬೃಹತ್ ಮುನ್ನಡೆ ಸಾಧಿಸಿದರು.
ಆ ಬಳಿಕ ರೈಡರ್‌ಗಳಾದ ನೀರಜ್ ನರ್ವಾಲ್, ಭರತ್ ಮತ್ತು ವಿಕಾಶ್ ಕಂಡೋಲಾ ಪಾಯಿಂಟ್ಸ್ ಗಳಿಸುತ್ತಲೇ ಇದ್ದರು. ಬುಲ್ಸ್ ತನ್ನ ಮುನ್ನಡೆಯನ್ನು 16-6 ರಲ್ಲಿ ವಿಸ್ತರಿಸಿತು. ಆದರೆ, ಜೈಪುರದ ಭವಾನಿ ರಜಪೂತ್ 17ನೇ ನಿಮಿಷದಲ್ಲಿ ಸೂಪರ್ ರೈಡ್ ನಡೆಸಿ ಉಭಯ ತಂಡಗಳ ನಡುವಿನ ಅಂತರವನ್ನು ತಗ್ಗಿಸಿದರು.
ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ ಕೂಡ ಲಯಕ್ಕೆ ಬಂದರು. ಮೊದಲಾರ್ಧದ ಕೊನೆಯಲ್ಲಿ ಎರಡೂ ತಂಡಗಳು 19-19 ರಲ್ಲಿ ಸಮಬಲದಲ್ಲಿದ್ದವು.
ದ್ವಿತೀಯಾರ್ಧದಲ್ಲಿ ಎರಡೂ ಕಡೆಯವರು ನಿಕಟ ಪೈಪೋಟಿ ನಡೆಸಿದರು. ಜೈಪುರ ಮತ್ತು ಬೆಂಗಳೂರಿನ ರಕ್ಷಣಾ ಘಟಕಗಳು ಉನ್ನತ ಫಾರ್ಮ್ ಅನ್ನು ಪ್ರದರ್ಶಿಸಿದವು. ಮತ್ತು ರೈಡರ್‌ಗಳು ಸತತ ವಾಗಿ ಔಟಾಗುತ್ತಿದ್ದರು. ಆದರೆ 36 ನೇ ನಿಮಿಷದಲ್ಲಿ ತಂಡಗಳು 27-27 ರಲ್ಲಿ ಸಬಲಗೊಂಡಿದ್ದವು. ಈ ವೇಳೆ ಕಂಡೋಲಾ ಸೂಪರ್ ರೈಡ್ ಮಾಡಿ 30-27 ರಲ್ಲಿ ನಿರ್ಣಾಯಕ ಮೂರು ಪಾಯಿಂಟ್ ಮುನ್ನಡೆ ಸಾಧಿಸಲು ಸಹಾಯ ಮಾಡಿದರು.
ಆ ಬಳಿಕ ಭರತ್ ಸೂಪರ್ ಟ್ಯಾಕಲ್ ಆಗಿದ್ದರಿಂದ ಪಂದ್ಯ ಮತ್ತೆ 30-30 ರಲ್ಲಿ ಸಮಬಲಗೊಂಡಿತು. ಆದರೆ, ಕಂಡೋಲಾ ಪಂದ್ಯದ ಕೊನೆಯ ನಿಮಿಷದಲ್ಲಿ ಅದ್ಭುತವಾದ ಸೂಪರ್ ರೈಡ್ ಮಾಡಿ, ಜೈಪುರವನ್ನು ಆಲ್ ಔಟ್ ಮಾಡಿ 37-31 ರಲ್ಲಿ ಬೆಂಗಳೂರು ರೋಚಕ ಗೆಲುವು ದಾಖಲಿಸಲು ಸಹಾಯ ಮಾಡಿದರು. ಈ ಅದ್ಧೂರಿ ಗೆಲುವಿನ ಮೂಲಕ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ