ಹೊಸದಿಗಂತ ವರದಿ, ಕಲಬುರಗಿ:
ಅನ್ವರ ಮಣಪ್ಫಾಡಿ ವರದಿಯಂತೆ ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಅಲ್ಪಸಂಖ್ಯಾತರಿಗೇ ನಿರಂತರ ಅನ್ಯಾಯ ಮಾಡಿದ್ದು, ಈ ಬಗ್ಗೆ ಶೀಘ್ರವೇ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಬುರಗಿಯ ಗ್ರಾಮೀಣ ಕ್ಷೇತ್ರದ ಮಹಾಗಾಂವ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಸಾವಿರಾರು ಎಕರೆ ವಕ್ಪ ಆಸ್ತಿ ನುಂಗಿ ನೀರು ಕುಡಿದಿದ್ದಾರೆ. ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಉಪ ಲೋಕಾಯುಕ್ತರು ವರದಿ ನೀಡಿದ್ದಾರೆ. ಈ ಬಗ್ಗೆ ಸದ್ಯದಲ್ಲಿಯೇ ತನಿಖೆ ನಡೆಸುವಂತೆ ಆದೇಶ ನೀಡುವೆ ಎಂದು ಹೇಳಿದರು.
ಕಾಂಗ್ರೆಸ್ ನವರು ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ ನಿರಂತರವಾಗಿ ಅನ್ಯಾಯ ಮಾಡಿದ್ದಾರೆ. ಇದರ ಪಾಠವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉಣ್ಣಲಿದ್ದು,ಮುಂಬರುವ 2023ರಲ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಹೇಳಿದರು.
ಮುಳುಗುವ ಸಂದರ್ಭದಲ್ಲಿ ಕಾಂಗ್ರೆಸ್ ಸ್ಟೇರಿಂಗ್ ಖಗೆ೯ ಕೈಗೆ.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಡುಗು ಮುಳುಗುತ್ತಿರುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖಗೆ೯ ಅವರ ಕೈಗೆ ಕಾಂಗ್ರೆಸ್ ಪಕ್ಷದ ಸ್ಟೇರಿಂಗ್,ನ್ನು ನೀಡಿ ಅಧ್ಯಕ್ಷರಾಗಿ ಮಾಡಿದ್ದು,ಯಾವ ಪ್ರಯೋಜನಕ್ಕೂ ಬಾರದು. ದೇಶದಲ್ಲಿ ಯಾವ ರೀತಿ ಕಾಂಗ್ರೆಸ್ ದೂಳಿಪಟವಾಗಿದೆಯೋ,ಅದೇ ರೀತಿ ರಾಜ್ಯದಲ್ಲಿ ಸಹ ಆಗಲಿದೆ ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ, ಅಲ್ಪಸಂಖ್ಯಾತ ಹಾಗೂ ಹಿಂದೂಳಿದ ವಗ೯ಗಳಿಗೆ ದ್ರೋಹ ಮಾಡಿದ್ದಾರೆ. ಸಮುದಾಯಗಳ ಮತಗಳನ್ನು ಪಡೆದು ಅವರಿಗೆ ಅಭಿವೃದ್ಧಿ ಮಾಡದೇ ವಂಚಿಸಿದ್ದು,ಇದರ ಫಲ ಮುಂದಿನ ಚುನಾವಣೆಗಳಲ್ಲಿ ಅನುಭವಿಸಲಿದ್ದಾರೆ. ಬರೀ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುತ್ತಿರುವ ಪಕ್ಷದ ಅಸ್ತಿತ್ವವನ್ನು ರಾಜ್ಯದಿಂದಲೂ ಕಿತ್ತು ಒಗೆಯಬೇಕೆಂದು ಜನಸಂಕಲ್ಪ ಸಮಾವೇಶದಲ್ಲಿ ಕರೆ ನೀಡಿದರು.