ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀಪ್ ಬಗ್ಗೆ ನಾನೆಲ್ಲೂ ಕೆಟ್ಟದಾಗಿ ಮಾತನಾಡಿಲ್ಲ, ಸಂಧಾನಕ್ಕೆ ರೆಡಿಯಾಗಿದ್ದೇನೆ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಹೇಳಿದ್ದಾರೆ.
ಸುದೀಪ್ ಹಣ ಪಡೆದು ಸಿನಿಮಾಗೆ ಡೇಟ್ ಕೊಟ್ಟಿಲ್ಲ ಎಂದು ಕುಮಾರ್ ಆರೋಪ ಮಾಡಿದ್ರು, ಈ ವಿಷಯವನ್ನು ಸುದೀಪ್ ಅಲ್ಲಗಳೆದು ಬಹಿರಂಗವಾಗಿ ಕ್ಷಮೆ ಕೇಳಿ ಇಲ್ಲವೇ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಇದೀಗ ಕುಮಾರ್ ಕೂಡ ಕೋರ್ಟ್‌ಗೆ ತೆರಳಿದ್ದು, ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ, ಫಿಲಂ ಚೇಂಬರ್ ಮುಂದು ಪ್ರತಿಭಟನೆ ಮಾಡಿದ್ದು, ಇದೀಗ ಕುಮಾರ್ ಸಂಧಾನಕ್ಕೆ ರೆಡಿಯಾಗಿದ್ದಾರೆ. ಸುದೀಪ್ ನನಗೆ ಸ್ಪಂದಿಸ್ತಾ ಇಲ್ಲ, ಅವರಿಂದ ಕಮ್ಯುನಿಕೇಷನ್ ಇಲ್ಲ ಎಂದಷ್ಟೇ ಹೇಳಿದ್ದೆ ಆದರೆ ಕೆಟ್ಟದಾಗಿ ಮಾತನಾಡಿಲ್ಲ. ರಾಜಿಗೆ ನಾವು ರೆಡಿ ಎಂದು ಹೇಳಿದ್ದಾರೆ.