‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ: ಮತ್ತೆ ಇರ್ತಾರಾ ಅಲ್ಲು ಅರ್ಜುನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿದ ಸಿನಿಮಾ ‘ಆರ್ಯ’. ಅಲ್ಲು ಅರ್ಜುನ್ ಅವರು ಈ ಚಿತ್ರಕ್ಕೆ ಹೀರೋ ಆದರೆ, ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡಿದ್ದರು. ದಿಲ್ ರಾಜು ಬಂಡವಾಳ ಹಾಕಿದ್ದರು. ಇದಾದ ಬಳಿಕ ಸಿನಿಮಾ ಸೂಪರ್ ಹಿಟ್ ಆಯಿತು. ಅದಾದ ಬಳಿಕ ‘ಆರ್ಯ 2’ ಸಿನಿಮಾ ಇದೇ ಕಾಂಬಿನೇಷನ್​ನಲ್ಲಿ ಬಂತು. ಈ ಚಿತ್ರ ನಿರೀಕ್ಷೆ ತಲುಪದೇ ಇದ್ದರೂ ಜನರು ಚಿತ್ರವನ್ನು ಇಷ್ಟಪಟ್ಟರು.

ಇದೀಗ ಮೂರನೇ ಪಾರ್ಟ್ ಮಾಡಲು ಸಿದ್ಧತೆ ನಡೆಯುತ್ತಿದ್ದು, ದಿಲ್ ರಾಜು ಅವರು ತೆಲುಗು ಫಿಲ್ಮ್​ ಚೇಂಬರ್​ನಲ್ಲಿ ‘ಆರ್ಯ 3’ ಟೈಟಲ್​ನ ನೋಂದಣಿ ಮಾಡಿಸಿದ್ದಾರೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣ ಆಗಿದೆ.

ಮೊದಲ ಪಾರ್ಟ್​ನಲ್ಲಿ ನಟನೆ ಮಾಡಿದವರು ಎರಡು ಹಾಗೂ ಮೂರನೇ ಪಾರ್ಟ್​​ನಲ್ಲಿ ಕೆಲಸ ಮಾಡಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಈ ಕಾರಣಕ್ಕೆ ದಿಲ್ ರಾಜು ಅವರು ‘ಆರ್ಯ 3’ ಚಿತ್ರದ ಮೂಲಕ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರನ್ನು ಒಟ್ಟಿಗೆ ಕರೆತರುತ್ತಾರಾ ಅಥವಾ ಅವರಿಗೆ ಬೇರೆ ಕಲಾವಿದರ ಕರೆತರುವ ಆಲೋಚನೆ ಇದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!