ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧನುಶ್ ವಿರುದ್ಧ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಆರೋಪ ಮಾಡಿದೆ. ನಟ ಧನುಶ್ ಈ ಹಿಂದೆ ತಮ್ಮ ನಿರ್ಮಾಣ ಸಂಸ್ಥೆಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಅಡ್ವಾನ್ಸ್ ಹಣ ಪಡೆದುಕೊಂಡಿದ್ದರು. ಆದರೆ ಸಿನಿಮಾ ಮಾಡಿಕೊಟ್ಟಿಲ್ಲ, ಅಲ್ಲದೆ ಅಡ್ವಾನ್ಸ್ ಹಣವನ್ನು ಸಹ ಮರಳಿಸಿಲ್ಲ ಎಂದು ಆರೋಪಿಸಿದೆ. ಇದೀಗ ಸಾಕಷ್ಟು ಒತ್ತಾಯದ ಬಳಿಕವೂ ಸಹ ಧನುಶ್ ತಮಗೆ ಡೇಟ್ಸ್ ನೀಡಿಲ್ಲ ಬದಲಿಗೆ ತಮ್ಮ ‘ಇಡ್ಲಿ ಕಡೈ’ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಆರೋಪಿಸಿದೆ.
ತಮಿಳಿನ ಫೈವ್ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಧನುಶ್ ಮೇಲೆ ಈ ಗಂಭೀರ ಆರೋಪ ಮಾಡಿದೆ. ಧನುಶ್ ಮಾತ್ರವೇ ಅಲ್ಲದೆ ಸೆಲ್ವಮನಿಯ ಬಗ್ಗೆಯೂ ಆರೋಪಗಳನ್ನು ಮಾಡಿದೆ. ಸೆಲ್ವಮನಿಯಿಂದಾಗಿಯೇ ನಿರ್ಮಾಪಕರುಗಳಿಗೆ ಸಿಗಬೇಕಾಗಿರುವ ನ್ಯಾಯ ಸಿಗುತ್ತಿಲ್ಲ, ಸೆಲ್ವಮಣಿಯಿಂದಲೇ ಧನುಶ್, ನಮಗೆ ಡೇಟ್ಸ್ ಕೊಡುತ್ತಿಲ್ಲ ಎಂದು ಫೈವ್ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರೋಪ ಮಾಡಿದೆ.
ಫೈನ್ ಸ್ಟಾರ್ ಕ್ರಿಯೇಷನ್ಸ್ ಈ ಹಿಂದೆ ಧನುಶ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಟ್ಟಿವೆ. ಧನುಶ್ ಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ‘ಆಡುಕುಲಂ’, ಮೊದಲ ಸೂಪರ್ ಹಿಟ್ ಸಿನಿಮಾ ‘ಪೊಲ್ಲಾಧವನ್’ ಸಿನಿಮಾಗಳಿಗೆ ಬಂಡವಾಳ ಹಾಕಿದ್ದು ಇದೇ ನಿರ್ಮಾಣ ಸಂಸ್ಥೆ. ಈಗ ಧನುಶ್ ಕಾಲ್ಶೀಟ್ಗಾಗಿ ನಿರ್ಮಾಪಕರ ಸಂಘದ ಮೆಟ್ಟಿಲು ಏರುವಂತಾಗಿದೆ. ಮುಂದೆ ನ್ಯಾಯಾಲಯದ ಮೆಟ್ಟಿಲು ಸಹ ಏರುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.