ಹೊಸದಿಗಂತ ವರದಿ ಮಂಗಳೂರು:
ಪ್ರಗತಿಪರ ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಅವರು ಶನಿವಾರ ನಿಧನ ಹೊಂದಿದರು.
ನಗರದ ದೇರೆಬೈಲು ಕೊಂಚಾಡಿ ಬಳಿಯಿರುವ ಗಿರಿನಗರದಲ್ಲಿ ಒಂಟಿಯಾಗಿ ವಾಸವಿದ್ದ ಅವರು ಇಂದು ಬೆಳಗ್ಗೆ ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ಕೋಮುಸೌಹಾರ್ದ ವೇದಿಕೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ.ಪಟ್ಟಾಭಿರಾಮ ಸೋಮಯಾಜಿಯವರು ಕೆಲದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶುಕ್ರವಾರ ರಾತ್ರಿ ಕೆಲ ಆಪ್ತರೊಡನೆ ಫೋನ್ ಮೂಲಕ ಮಾತನಾಡಿದ್ದರು. ಆದರೆ ಶನಿವಾರ ಬೆಳಗ್ಗೆ ಮನೆಯಿಂದ ಹೊರಬಾರದಿರುವುದನ್ನು ನೋಡಿ ನೆರೆಹೊರೆಯವರು ಪೊಲೀಸರರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಮನೆಬಾಗಿಲನ್ನು ಒಡೆದು ನೋಡಿದಾಗ ಅವರು ಮಲಗಿದಲ್ಲೇ ಕೊನೆಯುಸಿರೆಳೆದಿದ್ದುದು ಕಂಡು ಬಂದಿದೆ. ವಿಚ್ಛೇದಿತರಾಗಿ ಒಂಟಿಯಾಗಿ ವಾಸವಿರುವ ಅವರಿಗೆ ಮಕ್ಕಳಿಲ್ಲ.