Tuesday, September 9, 2025

FOOD | ಪ್ರೊಟೀನ್ ಭರಿತ ಸೋಯಾ ಚಂಕ್ಸ್‌ ಬಿರಿಯಾನಿ! ಪವರ್ ಪ್ಯಾಕ್ ಬ್ರೇಕ್ ಫಾಸ್ಟ್ ರೆಸಿಪಿ

ಸೋಯಾ ಚಂಕ್ಸ್‌ ಅನ್ನು “ವೇಜಿಟೇರಿಯನ್ ಮಾಂಸ” ಅಂತಲೂ ಕರೆಯುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಫೈಬರ್ ಹಾಗೂ ಶಕ್ತಿದಾಯಕ ಪೋಷಕಾಂಶಗಳು ಇರುತ್ತವೆ. ಸಾಮಾನ್ಯವಾಗಿ ಕರಿಯಲ್ಲೋ, ಕುರ್ಮಾದಲ್ಲೋ ಬಳಸುವ ಸೋಯಾ ಚಂಕ್ಸ್‌ನಿಂದ ರುಚಿಕರವಾದ ಬಿರಿಯಾನಿಯನ್ನೂ ಮಾಡಬಹುದು.

ಬೇಕಾಗುವ ಪದಾರ್ಥಗಳು:

ಅಕ್ಕಿ – 2 ಕಪ್ (ಬಾಸ್ಮತಿ ರೈಸ್)
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 2 (ಸ್ಲೈಸ್‌ ಮಾಡಿ)
ಟೊಮ್ಯಾಟೊ – 2
ಹಸಿಮೆಣಸು – 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್
ಹಾಲು/ಮೊಸರು – ½ ಕಪ್
ಬಿರಿಯಾನಿ ಎಲೆ (ಬೇ ಲೀಫ್) – 1
ಲವಂಗ – 3
ಏಲಕ್ಕಿ – 2
ದಾಲ್ಚಿನ್ನಿ – 1 ಚಿಕ್ಕ ತುಂಡು
ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – 1 ಟೀ ಸ್ಪೂನ್
ಪುದೀನಾ ಎಲೆ – ಒಂದು ಕೈ ತುಂಬ
ಕೊತ್ತಂಬರಿ ಸೊಪ್ಪು – ಒಂದು ಕೈ ತುಂಬ
ಎಣ್ಣೆ/ ತುಪ್ಪ – 3 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 4 ಕಪ್

ತಯಾರಿಸುವ ವಿಧಾನ:

ಮೊದಲು ಸೋಯಾ ಚಂಕ್ಸ್‌ನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ನೀರನ್ನು ತೆಗೆದು ಸರಿಯಾಗಿ ಹಿಂಡಿಕೊಳ್ಳಿ.

ಪಾತ್ರೆಯಲ್ಲಿ ಎಣ್ಣೆ ಹಾಕಿ, ಬಿರಿಯಾನಿ ಎಲೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ. ಸುವಾಸನೆ ಬಂದ ಮೇಲೆ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕರಿಯಿರಿ. ನಂತರ ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ಈಗ ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಹಾಕಿ ಕಲಸಿ. ಹಾಲು ಅಥವಾ ಮೊಸರು ಹಾಕಿ ಮಿಕ್ಸ್ ಮಾಡಿ. ಜೊತೆಗೆ ನೆನೆಸಿದ ಸೋಯಾ ಚಂಕ್ಸ್ ಸೇರಿಸಿ ಚೆನ್ನಾಗಿ ಕಲಸಿ. ಈಗ ತೊಳೆದ ಅಕ್ಕಿ ಹಾಕಿ ಕಲಸಿ. ನೀರು ಹಾಗೂ ಉಪ್ಪು ಹಾಕಿ. ಪುದೀನಾ ಎಲೆ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ ಬೇಯಿಸಿ.

ಇದನ್ನೂ ಓದಿ