ಹೊಸದಿಗಂತ ವರದಿ ಕಲಬುರಗಿ:
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ, ನಗರದಲ್ಲಿ ಅಜ್ಜಿಯೊಬ್ಬರು ಬೀದಿಗಿಳಿದು ಪ್ರತಿಭಟನೆಯಲ್ಲಿ ಭಾಗಿಯಾದ ಸನ್ನಿವೇಶ ನಡೆದಿದೆ.
ನಗರದ ಜಗತ್ ವೃತ್ತದಲ್ಲಿ ಹಿರಿಯ ವಯಸ್ಸಿನ ದ್ಯಾವಮ್ಮ ಬೆಳಕೋಟ್ ಎಂಬುವವರು ವೃತ್ತದ ಅಂಬೇಡ್ಕರ್ ಅವರ ಪುತ್ಥಳಿ ಎದುರು ಕೂತು ಪ್ರತಿಭಟನೆ ನಡೆಸಿ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ದ್ಯಾವಮ್ಮ ಬೆಳಕೋಟ್, ಅಂಬೇಡ್ಕರ್ ಅವರಿಗೆ ಅವಮಾನ ನಮ್ಮ ಅವಮಾನ. ನಮ್ಮ ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡುವರಿಗೆ ನಮ್ಮ ದಿಕ್ಕಾರವಿದೆ.ಕೂಡಲೇ ಆ ಯಪ್ಪನಿಗೆ ಪಾಠ ಕಲಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಶಿವಾನಂದ ಹೊನಗುಂಟಿ, ಪಾಲಿಕೆ ಸದಸ್ಯೆ ರೇಣುಕಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.