ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.
ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಬಂದ್‌ಗೆ ಬರೋಬ್ಬರಿ 150 ಸಂಘಟನೆಗಳು ಸಾಥ್ ನೀಡಿವೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಬಂದ್ ಮಾಡಿ ಆದರೆ ಶಾಂತಿಯುತವಾಗಿ ಮಾಡಿ. ರಾಜ್ಯದ ಹಿತ ಕಾಪಾಡಲು ಎಲ್ಲ ರೀತಿ ಸಹಕಾರ ನೀಡುತ್ತೇವೆ. ನಾನು ಒಬ್ಬ ಮಂತ್ರಿಯಾಗಿ ಹೆಚ್ಚೇನೂ ಮಾತನಾಡಲಾರೆ ಕೋರ್ಟ್ ಬಗ್ಗೆಯೂ ಗೌರರವಿದೆ, ಜನರ ಬಗ್ಗೆಯೂ ಕಾಳಜಿ ಇದೆ ಎಂದಿದ್ದಾರೆ.
ನಮ್ಮ ನೆಲ,ಜಲ,ಭಾಷೆ ಉಳಿಸಿಕೊಳ್ಳಳು ಹೋರಾಟ ಮಾಡಬಹುದು. ನಿಮ್ಮ ಹೋರಾಟಕ್ಕೆ ಅಡಚಣೆ ಮಾಡುವುದಿಲ್ಲ. ಆದರೆ ಹೋರಾಟದ ವೇಳೆ ಅಮಾಯಕರಿಗೆ, ಸಾರ್ವಜನಿಕ ಆಸ್ತಿಗೆ ತೊಂದರೆಯಾಗಂತೆ ಶಾಂತಿಯುತವಾಗಿ ಪ್ರತಿಭಟಿಸಿ ಎಂದಿದ್ದಾರೆ.