ಹೊಸದಿಗಂತ ಡಿಜಿಟಲ್ ಡೆಸ್ಕ್ :
ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧಅಮೆರಿಕದಾದ್ಯಂತ ವಿವಿಧ ಸಮುದಾಯಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಟ್ರಂಪ್ ನೀತಿ ದೇಶದ ಪ್ರಜಾಪ್ರಭುತ್ವದ ಆದರ್ಶಗಳಿಗೆ ಅಪಾಯ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಶ್ವೇತಭವನದ ಮುಂದೆ ರ್ಯಾಲಿ ನಡೆಸಲಾಯಿತು. 250 ವರ್ಷಗಳ ಹಿಂದೆ 1775ರ ಏಪ್ರಿಲ್ 19 ರಂದು ಕ್ರಾಂತಿಕಾರಿ ಸಮರ ಆರಂಭಗೊಂಡ ಸ್ಮರಣಾರ್ಥ ಮೆರವಣಿಗೆಗಳನ್ನು ನಡೆಸಲಾಯಿತು.
ಅಮೆರಿಕದ್ಯಂತ ಸುಮಾರು 400 ಪ್ರತಿಭಟನಾ ರ್ಯಾಲಿಗಳನ್ನು ಯೋಜಿಸಲಾಗಿತ್ತು. ಪ್ರತಿಭಟನಾಕಾರರು ಫೆಡರಲ್ ಉದ್ಯೋಗ ಕಡಿತ, ಆರ್ಥಿಕ ನೀತಿಗಳು ಮತ್ತು ನಾಗರಿಕ ಸ್ವಾತಂತ್ರ್ಯ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪೋರ್ಟ್‌ಲ್ಯಾಂಡ್, ಓರೆಗಾನ್‌ಗಳ ಮುಖಾಂತರ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರೆ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೂರಾರು ಜನರು ಟ್ರಂಪ್ ಅವರನ್ನು ಪದಚ್ಯುತಿಗೊಳಿಸಿ, ಇಲ್ಲವೆ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂದು ಸಮುದ್ರದಂಡೆಯ ಮರಳಿನ ಮೇಲೆ ಬರೆದು ಆಕ್ರೋಶ ವ್ಯಕ್ತಪಡಿಸಿದರು.