ಅಮಿತ್‌ಶಾ ಹೇಳಿಕೆ ಖಂಡಿಸಿ ಗದಗ-ಕಲಬುರಗಿಯಲ್ಲಿ ಪ್ರತಿಭಟನೆ, ಶಾಲೆಗೆ ರಜೆ, ಮದ್ಯ ಕೂಡ ಬ್ಯಾನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಹಲವೆಡೆ ಇದೀಗ ಅಮಿತ್‌ ಶಾ ವಿರುದ್ಧ ಕೂಗು ಕೇಳಿಬರುತ್ತಿದೆ. ಇದೀಗ ಅಮಿತ್‌ ಶಾ ಹೇಳಿಕೆಯನ್ನ ಖಂಡಿಸಿ ಕಲಬುರಗಿ, ಗದಗ ಜಿಲ್ಲೆಗಳಲ್ಲಿ ಪ್ರತಿಭಟನೆ ಶುರುವಾಗಿದೆ.

ಡಿಸೆಂಬರ್​ 17ರಂದು ಸಂಸತ್​ನಲ್ಲಿ ಸಂವಿಧಾನದ 75 ನೇ ವಾರ್ಷಿಕೋತ್ಸವದ ಸಂದರ್ಭದ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ್‌‌ ಕುರಿತು ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಗುರಿಯಾಗಿದೆ. ಇದೇ ಮಾತು ಕಾಂಗ್ರೆಸ್‌ನವರಿಗೆ ಅಸ್ತ್ರವಾಗಿದೆ. ದೇಶಾದ್ಯಂತ ಪ್ರತಿಭಟನೆ ಕಿಡಿ ಹೊತ್ತಿಸಿದೆ. ಇತ್ತ ಕರ್ನಾಟಕದಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳಿಂದ ಇವತ್ತು ಕಲಬುರಗಿ ಬಂದ್​ಗೆ ಕರೆ ನೀಡಲಾಗಿದೆ.

ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಯನ್ನ ಶುರು ಮಾಡ್ಕೊಂಡಿರೋ ದಲಿತ ನಾಯಕರು. ಸಂಜೆ 6 ರವರೆಗೆ ಧಿಕ್ಕಾರಗಳ ಕೂಗು.. ಅಮಿತ್​ ಶಾ ವಿರುದ್ಧ ಘೋಷಣೆಗಳು ನಿಲ್ಲದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ತಯಾರಿ ಮಾಡ್ಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳೂ ನಡೆಯಬಾರದೆಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಲಬುರಗಿ ಮಹಾನಗರದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕಲಬುರಗಿ ಡಿಡಿಪಿಐ ಸೂರ್ಯಕಾಂತ ಮದಾನೆ ಆದೇಶಿಸಿದ್ದಾರೆ. ಇನ್ನೂ ಬಂದ್​ಗೆ ಸಂವಿಧಾನ ಹಿತರಕ್ಷಣಾ ಸಮಿತಿ.. ದಲಿತಪರ ಸಂಘಟನೆಗಳು.. ದಲಿತ ನಾಯಕರ ಒಕ್ಕೂಟ ಸೇರಿ ವಿವಿಧ ಸಂಘಟನೆಗಳಿಂದ ಬಂದ್​ನ ನೇತೃತ್ವವನ್ನ ವಹಿಸಿದ್ದಾರೆ. ಕಲಬುರಗಿ ತಾಲೂಕಿನಾದ್ಯಂತ ಮದ್ಯ ಮಾರಾಟವನ್ನ ನಿಷೇಧ ಮಾಡಲಾಗಿದೆ. ರಾತ್ರಿ 12 ರಿಂದ ಇವತ್ತು ಮಧ್ಯ ರಾತ್ರಿ ವರೆಗೆ ಮದ್ಯ ಮಾರಾಟ ನಿಷೇಧಗೊಳಿಸಿ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!