March 24, 2026
Tuesday, March 24, 2026
spot_img

VIRAL | ರೈಲ್ವೆಯಲ್ಲಿ ಮಗನಿಗೆ ಕೆಲಸ ಸಿಕ್ಕ ಖುಷಿಗೆ ಇಡೀ ಮನೆಗೆ ಟ್ರೈನ್‌ನಂತೆ ಬಣ್ಣ ಬಳಿದ ಹೆಮ್ಮೆಯ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಾವು ಓದದಿದ್ರೂ ಮಕ್ಕಳು ಓದಲಿ ಎಂದು ಕಷ್ಟಪಟ್ಟು ತಂದೆತಾಯಿ ಓದಿಸುತ್ತಾರೆ. ಅದನ್ನು ಅರಿತ ಮಕ್ಕಳು ಚೆನ್ನಾಗಿ ಓದಿ ದೊಡ್ಡ ನೌಕರಿ ಗಿಟ್ಟಿಸಿಕೊಂಡ್ರೆ ಪೋಷಕರಿಗಿಂತ ಖುಷಿ ಇನ್ಯಾರಿಗೂ ಆಗೋದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಸರ್ಕಾರಿ ನೌಕರಿ ಸಿಕ್ಕರೆ ಊರೂರಿಗೇ ಸಿಹಿ ಕೊಟ್ಟು ಸಿಹಿ ಹಂಚಲಾಗುತ್ತದೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗನಿಗೆ ರೈಲ್ವೆಯಲ್ಲಿ ಕೆಲಸ ಸಿಕ್ಕ ಖುಷಿಗೆ ಇಡೀ ಮನೆಯನ್ನೇ ರೈಲಿನಂತೆ ತಯಾರಿಸಿದ್ದಾರೆ.

ರಾಜಸ್ಥಾನದ ಗ್ರಾಮೀಣ ಪ್ರದೇಶದ ತಂದೆಯೊಬ್ಬರು ಮನೆಗೆ ನೀಲಿ ಹಾಗೂ ಬಿಳಿ ಬಣ್ಣ ಬಳಿದು, ರೈಲಿನ ಚಕ್ರಗಳನ್ನು ಬರೆದು ಮನೆಯನ್ನು ನೋಡಿದರೆ ಇದು ರೈಲಾ ಎನ್ನುವಂತೆ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಮಗನಿಗೆ ರೈಲ್ವೆಯಲ್ಲಿ ನೌಕರಿ ಸಿಕ್ಕಿದ್ದಕ್ಕೆ ತಂದೆಗೆ ಹೆಮ್ಮೆಯಾಗಿದೆ. ಇಡೀ ಊರೇ ನೋಡುವಂತೆ ಮನೆಗೆ ಬಣ್ಣ ಬಳಿಸಿ ಸಂಭ್ರಮಿಸಿದ್ದಾರೆ. ತಂದೆಯ ಮುಗ್ಧ ಪ್ರೀತಿಗೆ ನೆಟ್ಟಿಗರು ತಲೆಬಾಗಿದ್ದಾರೆ.



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !