‘ಆಪರೇಷನ್ ಸಿಂದೂರ್ ಸಮಯ ಯೋಧರಿಗೆ ಆಹಾರ ಪೂರೈಕೆ: ಬಾಲಕನ ಧೈರ್ಯಕ್ಕೆ ಮನಸೋತು ಶಿಕ್ಷಣದ ಹೊಣೆ ಹೊತ್ತ ಸೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕ್ ವಿರುದ್ದದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಯ ಯೋಧರಿಗೆ ಆಹಾರ ಪೂರೈಸಿದ 10 ವರ್ಷದ ಬಾಲಕನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಭಾರತೀಯ ಸೇನೆ ಭಾನುವಾರ ಹೇಳಿದೆ.

ಶವನ್ ಸಿಂಗ್ ಎನ್ನುವ ಬಾಲಕ ಪಂಜಾಬ್‌ನ ಫೆರೋಜೆಪುರ್ ಜಿಲ್ಲೆಯ ತಾರಾವಾಲಿ ಗ್ರಾಮದಲ್ಲಿ ನಿಯೋಜನೆಗೊಂಡ ಸೈನಿಕರು ಪಾಕಿಸ್ತಾನದ ಸೇನೆ ಜತೆಗೆ ಗುಂಡಿನ ಚಕಮಕಿ ನಡೆಸುತ್ತಿದ್ದ ವೇಳೆ ನೀರು, ಚಹಾ, ಹಾಲು, ಲಸ್ಸಿ ಸೇರಿ ವಿವಿಧ ರೀತಿಯ ಆಹಾರವನ್ನು ಪೂರೈಸಿದ್ದನು. ಇದೀಗ ಈ ಬಾಲಕನ ಧೈರ್ಯ ಮತ್ತು ಉತ್ಸಾಹ ಕಂಡು ಭಾರತೀಯ ಸೇನೆಯ ಮನ ಸೆಳೆದಿದ್ದು, ಗೋಲ್ಡನ್ ಆ್ಯರೋ ವಿಭಾಗವು ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದೆ. ಬಾಲಕ ಕೂಡ ದೊಡ್ಡವನಾದ ಮೇಲೆ ಸೇನೆ ಸೇರುವ ಅಭಿಲಾಷೆ ಹೊಂದಿದ್ದಾನೆ ಎಂದು ಸೇನೆ ಹೇಳಿದೆ.

ತಾರಾವಾಲಿ ಗ್ರಾಮ ಅಂತಾರಾಷ್ಟ್ರೀಯ ಗಡಿಯಿಂದ 2 ಕಿ.ಮೀ. ದೂರದಲ್ಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!