ಹೊಸದಿಗಂತ ವರದಿ, ಕಲಬುರಗಿ:
545 ಪಿಎಸ್ಐ ನೇಮಕಾತಿ ಪರೀಕ್ಷೆ ಆಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಅಭ್ಯರ್ಥಿಯನ್ನು ಬಂಧನ ಮಾಡಿದ್ದಾರೆ.
ಸಂಜೀವಕುಮಾರ್ ಮುರಡಿ (29) ಬಂಧಿತ ಅಭ್ಯರ್ಥಿ ಆಗಿದ್ದು,ಕಲಬುರಗಿ ನಗರದ ರೇಷ್ಮಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು,ಪರೀಕ್ಷೆಯಲ್ಲಿ ಬ್ಲೂಟೂತ್,ನ್ನು ಬಳಸಿ ಅಕ್ರಮವೆಸಗಿದ್ದನು ಎಂದು ತಿಳಿದುಬಂದಿದೆ.
ಕಲ್ಯಾಣ ಕನಾ೯ಟಕ ಕೋಟಾದಲ್ಲಿ 14ನೇ ರ್ಯಾಂಕ್ ಪಡೆದಿದ್ದ,ಸಂಜೀವಕುಮಾರ್,ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ನೌಕರನಾಗಿ ಕೆಲಸ ಮಾಡುತ್ತಿದ್ದನು.
ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.