ಹೊಸ ದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಯ ಅಕ್ರಮದಲ್ಲಿ, ಅಕ್ರಮದ ಮೂಲಕ ಪಾಸಾಗಿರುವ ಬಂಧಿತ ಅಭ್ಯರ್ಥಿಗಳಾದ ಚೇತನ ನಂದಗಾಂವ್, ಅರುಣ್ ಕುಮಾರ್ ಅವರಿಬ್ಬರು ಸಲ್ಲಿಸಿದ ಜಾಮೀನು ಅರ್ಜಿ ಗೆ ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.
ಆರೋಪಿಗಳು ಜಾಮೀನಿಗೆ ಅಜಿ೯ ಸಲ್ಲಿಸಿದ್ದರು, ಆದರೆ ಗುರುವಾರ ನ್ಯಾಯಮೂರ್ತಿ ಶುಕ್ಲಾಕ್ಷ ಪಾಲನ್ ಅವರು, ಸಲ್ಲಿಸಿದ ಅಜಿ೯ಗಳನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಇಬ್ಬರು ಅಭ್ಯರ್ಥಿಗಳು ಹಣ ಕೊಟ್ಟು ಅಕ್ರಮದ ಮೂಲಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಇನ್ನೂಮುಂದೆ ಇವರಿಗೆ ಜೈಲೆ ಗತಿಯಾಗಿ ಹೋಗಿದೆ.
ಇಬ್ಬರು ಆರೋಪಿಗಳ ಸಿಐಡಿ ಕಸ್ಟಡಿ ಅಂತ್ಯ,ಡಿವೈಎಸ್ಪಿ ಹಾಗೂ ಸಿಪಿಐ ಜೈಲಿಗೆ
ಇನ್ನೂ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಸಿಪಿಐ ಆನಂದ ಮೇತ್ರಿ ಅವರ ಸಿಐಡಿ ಕಸ್ಟಡಿ ಗುರುವಾರ (ಮೇ 12) ಅಂತ್ಯವಾಗಿದೆ.
ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಅಧಿಕಾರಿಗಳು ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಮೇ 5ರಂದು ಇಬ್ಬರನ್ನೂ ಬಂಧಿಸಲಾಗಿತ್ತು. ಇಂದು ಗುರುವಾರ ಅವರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಿ,ತದನಂತರ ಜೈಲಿಗೆ ಕಳುಹಿಸಿದ್ದಾರೆ.
ಇಲ್ಲಿಯವರೆಗೆ ಒಟ್ಟಾರೆ ಆರೋಪಿಗಳು ಸಲ್ಲಿಸಿದ ಜಾಮೀನು ಅಜಿ೯ಗಳಲ್ಲಿ ಯಾರ ಅಜಿ೯ಯೂ ಕೂಡ ನ್ಯಾಯಾಲಯ ಸ್ವೀಕೃತಿ ಮಾಡಿಲ್ಲ.