ಹೊಸದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಹಣಕಾಸಿನ ವಹಿವಾಟು ಬಗ್ಗೆ ತನಿಖೆ ನಡೆಸುವಂತೆ ಸಿಐಡಿ, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ.
ಪರೀಕ್ಷಾ ಅಕ್ರಮದಲ್ಲಿ ಆರ್.ಡಿ.ಪಾಟೀಲ್ ಮತ್ತು ಆತನ ಸಹಚರರು ನಡೆಸಿರುವ ಹಣಕಾಸಿನ ವಹಿವಾಟು ಕುರಿತು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಇಡಿಗೆ ಪತ್ರ ಬರೆದಿದ್ದು, ಜಾರಿ ನಿರ್ದೇಶನಾಲಯ ಶೀಘ್ರವೇ ತನಿಖೆ ನಡೆಸುವ ಸಾಧ್ಯತೆ ಇದೆ. ಇದೀಗ ಪ್ರಕರಣದಲ್ಲಿ ಅಕ್ರಮ ಎಸಗಿರುವವರಿಗೆ ಇಡಿ ಡ್ರಿಲ್ ಶುರುವಾಗುವ ಭಯ ಹುಟ್ಟಿದೆ.
ಪಿಎಸ್ಐ ಪರೀಕ್ಷಾರ್ಥಿಗಳ ಬಳಿ ಡೀಲ್ ಕುದುರಿಸಿ ಪಡೆದ ಹಣವನ್ನು ಆರ್.ಡಿ. ಪಾಟೀಲ್ ಮನಬಂದಂತೆ ಹೂಡಿಕೆ ಮಾಡಿರುವುದು, ಜೊತೆಗೆ ಆಸ್ತಿ ಖರೀದಿ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.