ಹೊಸ ದಿಗಂತ ವರದಿ, ಕಲಬುರಗಿ:
ಪಿಎಸ್ ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೆಎಸ್ ಆರ್ ಪಿ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರ ಅಮಾನತುಗೊಂಡಿದ್ದಾರೆ.
ಪಿಎಸ್ ಐ ಅಕ್ರಮ ಕೇಸಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ವೈಜನಾಥ ರೇವೂರರನ್ನು ಬಂಧಿಸಿದ್ದರು. ಕಳೆದ ಆರು ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿದ್ದಾರೆ.
ಅಕ್ರಮದ ಕಿಂಗ್ ಪಿನ್ ಆಗಿರುವ ಆರ್.ಡಿ.ಪಾಟೀಲ್ ಜತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು. ಹಲವು ಅಭ್ಯರ್ಥಿಗಳ ಡೀಲ್ ಕುದುರಿಸಿದ್ದರು.
ರೇವೂರ ಬಂಧನ ಸಿಐಡಿ ಖಚಿತಪಡಿಸಿದ ನಂತರ ಕೆಎಸ್ ಆರ್ ಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದರು.ಅದರಂತೆ ಸರ್ಕಾರ ಸಸ್ಪೆಂಡ್ ಮಾಡಿ ಗುರುವಾರ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.