ಲಿವ್ ಇನ್ ಸಂಗಾತಿ ಕೊಂದು ಶವದ ಪಕ್ಕವೇ ಎರಡು ದಿನ ಮಲಗಿದ್ದ ಸೈಕೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವ್ಯಕ್ತಿಯೊಬ್ಬ ಲಿವ್ ಇನ್ ಸಂಗಾತಿಯನ್ನು ಕೊಂದು ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟು ಶವದೊಂದಿಗೆ ಎರಡು ದಿನ ಮಲಗಿದ್ದ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದೆ.

ಹೌದು. 32 ವರ್ಷದ ಸಚಿನ್ ರಜಪೂತ್ ಎಂಬಾತ 28 ವರ್ಷದ ರಿತಿಕಾ ಸೇನ್‌ಳನ್ನು ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ರಾತ್ರಿಗಳು ಅದರ ಪಕ್ಕದಲ್ಲಿ ಏನೂ ಆಗಿಲ್ಲ ಎನ್ನುವಂತೆ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ಜೂನ್ 27 ರ ರಾತ್ರಿ ತೀವ್ರ ವಾಗ್ವಾದದ ನಂತರ ಕೊಲೆ ನಡೆದಿದೆ. ಕೆಲಸ ಇಲ್ಲದೆ ಅಸೂಯೆಯಿಂದ ಬಳಲುತ್ತಿದ್ದ ಸಚಿನ್, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರಿತಿಕಾಳ ಮೇಲೆ ತನ್ನ ಬಾಸ್ ಜೊತೆ ಸಂಬಂಧವಿದೆ ಎಂದು ಶಂಕಿಸಿದ್ದ ಎನ್ನಲಾಗಿದೆ.

ಜಗಳ ಹಿಂಸಾತ್ಮಕವಾಗಿ ತಿರುಗಿದ್ದು, ಕೋಪದಿಂದ ಆಕೆಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಆದರೆ ನಂತರ ಸಚಿನ್‌, ಎಚ್ಚರಿಕೆಯಿಂದ ಮೃತದೇಹವನ್ನು ಬೇಡ್ ಶಿಟ್ ನಿಂದ ಸುತ್ತಿ ಹಾಸಿಗೆಯ ಮೇಲೆ ಬಿಟ್ಟು. ಅದೇ ಕೊಠಡಿಯಲ್ಲಿ ಇದ್ದಾನೆ. ಎರಡು ದಿನಗಳ ಕಾಲ ಮೃತ ದೇಹದ ಪಕ್ಕದಲ್ಲಿ ಮಲಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆತಭಾರೀ ಪ್ರಮಾಣದಲ್ಲಿ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!