ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಅಪಹಾಸ್ಯ: ಆತ್ಮಹತ್ಯೆ ಮಾಡಿಕೊಂಡ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ಪಬ್​ಜಿ ಗೇಮ್ ಸೋತಿದ್ದಕ್ಕೆ16 ವರ್ಷದ ಬಾಲಕನೋರ್ವ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಭಾನುವಾರ ನಡೆದಿದೆ.
ಬಾಲಕನ ತಂದೆ ಶಾಂತಿರಾಜ್ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾಗಿದ್ದಾರೆ.
ಮೃತ ಬಾಲಕ ಪಬ್​ಜಿ ಆಟಕ್ಕೆ ದಾಸನಾಗಿದ್ದು, ಇಂದುತನ್ನ ಸ್ನೇಹಿತರೊಂದಿಗೆ ಆಟ ಆಡಿದ್ದಾನೆ. ಆದರೆ, ಆಟದಲ್ಲಿ ಸೋತಾಗ ಸ್ನೇಹಿತರು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಅವಮಾನಗೊಂಡಂತೆ ಆಗಿ ಮನೆಗೆ ಬಂದು ಫ್ಯಾನ್​ಗೆ ಬಾಲಕ ನೇಣು ಬಿಗಿದುಕೊಂಡಿದ್ದಾನೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!