ಏ.19ರಂದು ಸಾರ್ವಜನಿಕ ನಾಮಪತ್ರ ಸಲ್ಲಿಕೆಗೆ ಎಲ್ಲರೂ ಭಾಗವಹಿಸಿ : ಬೊಮ್ಮಾಯಿ

ಹೊಸ ದಿಗಂತ ವರದಿ, ಸವಣೂರ :

ನಿಮ್ಮ ಆಶಿರ್ವಾದದಿಂದ ನಾಮಪತ್ರ ಸಲ್ಲಿಸಿದ್ದೇನೆ. ಸಾರ್ವಜನಿಕ ನಾಮಪತ್ರ ಸಲ್ಲಿಕೆಯನ್ನು ಏಪ್ರೀಲ್ 19ರಂದು ಅತಿ ವಿಜ್ರಂಭಣೆಯಿಂದ ಮಾಡಲು ನೀವೆಲ್ಲಾ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿದರು.

ಶನಿವಾರ ಸವಣೂರ ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾರಡಗಿ ಮತ್ತು ಹುರಳಿಕುಪ್ಪಿ ಜಿಲ್ಲಾ ಪಂಚಾಯತ್ತ ಬಿಜೆಪಿ ಕಾರ್ಯಕರ್ತರ ಸಬೆಯಲ್ಲಿ ಮಾತನಾಡಿ, ಕಾಂಗ್ರೆಸ್ ನವರು ಜೆಡಿಎಸ್ ಜೊತೆ ಸೇರಿ ಅಪವಿತ್ರ ಸಮ್ಮಿಶ್ರ ಸರ್ಕಾರ ಮಾಡಿದರು. ಈ ರಾಜ್ಯಕ್ಕೆ ಸ್ಥಿರ ಸರ್ಕಾರ ಕೊಡಬೇಕು ಅಂತಾ ಕೆಲವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು ಎಂದರು.

ಕೋವಿಡ್ ಪರಿಸ್ಥಿತಿಯಲ್ಲಿ ಸವಣೂರು ಕೂಡಾ ತತ್ತರಿಸಿತ್ತು. ಅಂದು ಉಚಿತ ರೈಸ್ , ವ್ಯಾಕ್ಸೀನ್ ಕೊಟ್ಟೆವು. 16 ತಾಸು ಕೆಲಸ ಮಾಡಿದ್ದೇನೆ, 5 ತಾಸು ನಿದ್ದೆ ಮಾಡಿದ್ದೇನೆ. ಪ್ರವಾಹ ಬಂದಾಗ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿದೆ. ದೊಡ್ಡ ಪ್ರಮಾಣದ ಸಹಾಯ ಶಿಗ್ಗಾಂವಿ – ಸವಣೂರು ತಾಲೂಕಿನಲ್ಲಿ ನಮ್ಮ ಸರ್ಕಾರದಿಂದ ಆಗಿದೆ. ಆರ್ಥಿಕ ಸುಧಾರಣೆ ಮಾಡುವುದರ ಜೊತೆ ಹಲವು ಯೋಜನೆ ಮಾಡಿದ್ದೇನೆ ಎಂದರು.

ಮೊದಲ ಕ್ಯಾಬಿನೆಟ್‌ನಲ್ಲಿ ರೈತ ವಿದ್ಯಾನಿಧಿ ಜಾರಿಗೆ ತಂದು, ಈ ವರ್ಷ ಎಲ್ಲಾ ರೈತ ಬಾಂಧವರಿಗೆ ಇನ್ಸುರೆನ್ಸ್. 3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ಯೋಜನೆ ಮಾಡಿದೆವು ಇಂತ ಹಲವಾರು ಯೋಜನೆಗಳನ್ನು ಇಂದು ಆಯಾ ಹಳ್ಳಿಗಳಲ್ಲಿ ಮಾಡಿರುವ ಕಾರ್ಯಗಳ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಮತ ಯಾಚಿಸುತ್ತೆನೆ ಎಂದು ಹೇಳಿದರು.

ನಾನು ಮಾತನಾಡಿದಂತೆ ನಮ್ಮ ಕೆಲಸ ಮಾತಾಡಬೇಕು. ನಮ್ಮ ಕೆಲಸ ನೋಡಿ ಜನ ಮತ ಕೊಡಬೇಕಿದೆ. ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಆಗಿದೆ. ಕಾಂಗ್ರೆಸ್‌ನಿಂದ ಹಲವಾರು ಜನ ಬಿಜೆಪಿ ಸೇರುತ್ತಿದ್ದಾರೆ. ಮೇ 10 ರಂದು ಮತದಾನದ ದಿನಾಂಕದಂದು 130 ಸ್ಥಾನಗಳಲ್ಲಿ ನಾವು ಮುಂದೆ ಇರಲಿದ್ದೇವೆ. ವಿರೋಧ ಪಕ್ಷದವರು ಮನ ಬಂದಂತೆ ಮಾತಾಡ್ತಾರೆ. ಯಾರು ಅಭಿವೃದ್ಧಿ ಮಾಡಿದಾರೆ? ಯಾರು ಮಾಡಿಲ್ಲ ಎಂಬುದು ಜನರಿಗೆ ಗೊತ್ತಿದೆ. ನಾನು ಮಾಡಿದ್ದು ತಾವು ಮಾಡಿದ್ದು ಅಂತ ಸಿಎಂ ಹೇಳ್ತಾರೆ ಅಂತ ಇಲ್ಲಿಯ ಮಾಜಿ ಶಾಸಕರು ಹೇಳಿದ್ದಾರೆ. ನನಗೆ ನಗಬೇಕೋ ಏನು ಮಾಡಬೇಕೋ ಗೊತ್ತಾಗಲಿಲ್ಲ ಎಂದರು.

ಈ ಇಡಿ ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ. ಹಿಗಾಗಿ, ಶಿಗ್ಗಾಂವ – ಸವಣೂರಿನ ಜನತೆಯು ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ವಿದೆ. ಮತದಾರರ ಶಕ್ತಿ ಎಂತಹದು ಎಂದು ಇಡಿ ರಾಜ್ಯಕ್ಕೆ ತೋರಿಸಬೇಕು ಎಂದರು.
ನಂತರ ಸವಣೂರ ತಾಲೂಕಿನ ಸುಮಾರು 15 ಕಾಂಗ್ರೇಸ್ ಕಾರ್ಯಕರ್ತರು ಬಿಜಿಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸೇರ್ಪಡೆ ಗೊಂಡ ಕಾರ್ಯಕರ್ತರಿಗೆ ಜಿಜೆಪಿ ಶಾಲ್ ಹಾಕುವು ಮುಖಾಂತರ ಮಾನ್ಯ ಸಿಎಂ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸವಣೂರ ಬಿಜೆಪಿ ಮುಖಂಡರು ಕಾರ್ಯಕರ್ತರು, ಕಾರಡಗಿ ಹುರಳಿಕುಪ್ಪಿ ಜಿಲ್ಲಾ ಪಂಚಾಯ್ತಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!