ಹೊಸದಿಗಂತ ಹುಬ್ಬಳ್ಳಿ:
ನಗರದ ಕೆಎಲ್ಇ ಸಂಸ್ಥೆ ಜೆ.ಜಿ.ವಾಣಿಜ್ಯ ಕಾಲೇಜ್ನಲ್ಲಿ ತರಗತಿ ನಡೆಯುವಾಗ ಪಿಯುಸಿ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಹುಲ್ ಕುರಬಗೌಡ (17) ಮೃತಪಟ್ಟಿರುವ ವಿದ್ಯಾರ್ಥಿ. ಹೃದಯಾಘಾತದಿಂದ ಸಾವು ಸಂಭವಿಸಿದ ಶಂಕೆ ವ್ಯಕ್ತವಾಗಿದೆ.
12ಗಂಟೆ ಸುಮಾರಿಗೆ ತರಗತಿ ನಡೆಯುವಾಗ ವಿದ್ಯಾರ್ಥಿಗೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಟೋ ಮೂಲಕ ಆಸ್ಪತ್ರೆಗೆ ರವಾನಿಸುವಾಗ ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಪಿಡ್ಸ್ ರೋಗದಿಂದ ಬಳಲುತಿದ್ದ ಎಂದು ಪಾಲಕರು ತಿಳಿಸಿದ್ದಾರೆ.
ಸದ್ಯ ಮೃತ ದೇಹವನ್ನು ನಗರದ ಕೆಎಂಸಿಆರ್ಐಗೆ ರವಾನಿಸಲಾಗಿದ್ದು,ಮರಣೋತ್ತರ ಪರೀಕ್ಷೆ ವರದಿ ಲಭ್ಯವಾದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಕೆಎಂಸಿಆರ್ಐ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.