August 31, 2026
Monday, August 31, 2026
spot_img

ಪಲ್ಯ, ಗ್ರೇವಿ & More 14 | ಒಮ್ಮೆ ಈ ರೀತಿ ಕರಿಬೇವಿನ ಚಟ್ನಿ ಮಾಡಿ! ಏನ್ ರುಚಿ ಇದೆ ಗೊತ್ತಾ?

ಕರಿಬೇವು ಅನ್ನೋದು ನಮ್ಮ ಅಡುಗೆಯಲ್ಲಿ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕೂದಲು, ಜೀರ್ಣಕ್ರಿಯೆ, ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುವ ಗುಣಗಳಿರುವ ಕರಿಬೇವಿನಿಂದ ಸವಿಯಾದ ಚಟ್ನಿ ಮಾಡಬಹುದು. ಇಡ್ಲಿ, ದೋಸೆ, ಅನ್ನ ಅಥವಾ ಚಪಾತಿಯ ಜೊತೆ ಕೂಡ ಸೂಪರ್ ಆಗಿ ಸೇರುತ್ತದೆ.

ಬೇಕಾಗುವ ಪದಾರ್ಥಗಳು
ಕರಿಬೇವು – 1 ಕಪ್
ತುರಿದ ತೆಂಗಿನಕಾಯಿ – ½ ಕಪ್
ಹುರಿದ ಕಡಲೆಬೇಳೆ – 2 ಚಮಚ
ಹಸಿಮೆಣಸಿನಕಾಯಿ – 2
ಬೆಳ್ಳುಳ್ಳಿ – 2 ಕಳಿ (ಐಚ್ಛಿಕ)
ಹುಣಸೆಹಣ್ಣು – ಚಿಕ್ಕ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ
ಒಗ್ಗರಣೆಗೆ:
ಸಾಸಿವೆ – ½ ಚಮಚ
ಉದ್ದಿನಬೇಳೆ – ½ ಚಮಚ
ಒಣಮೆಣಸಿನಕಾಯಿ – 1
ಕರಿಬೇವು – ಸ್ವಲ್ಪ
ಎಣ್ಣೆ – 1 ಚಮಚ

ಮಾಡುವ ವಿಧಾನ

ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕರಿಬೇವು ಎಲೆಗಳನ್ನು 2–3 ನಿಮಿಷ ಸ್ವಲ್ಪ ಹುರಿಯಿರಿ. ಇದರಿಂದ ಹಸಿ ವಾಸನೆ ಹೋಗುತ್ತದೆ. ಈಗ ಹುರಿದ ಕರಿಬೇವು, ತೆಂಗಿನಕಾಯಿ, ಹುರಿದ ಕಡಲೆಬೇಳೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಮೃದುವಾಗಿ ಅರೆಯಿರಿ.

ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !