ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರಿ ಗರಿಯಾದ ದೋಸೆ ಯಾರಿಗೆ ತಾನೆ ಇಷ್ಟ ಇಲ್ಲ? ಹಾಗಾದ್ರೆ ಕುಂಬಳಕಾಯಿಯ ಗರಿ ಗರಿದೋಸೆ ಮಾಡೋದನ್ನು ಇಂದು ನೋಡೋಣ. ಬೂದಿಕುಂಬಳದ ಈ ದೋಸೆ ಆರೋಗ್ಯಕ್ಕೂ ಉತ್ತಮ.
ಬೂದಿಗುಂಬಳ ಸಿಪ್ಪೆ ತೆಗೆದು, ತಿರುಳಿನಿಂದ ಬೀಜ ಬೇರ್ಪಡಿಸಿಕೊಳ್ಳಿ. ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
ಮೂರು ಗ್ಲಾಸ್ ದೋಸೆ ಅಕ್ಕಿ ಹಾಗೂ ಕಾಲು ಗ್ಲಾಸ್ ಮೆಂತೆಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಚೆನ್ನಾಗಿ ನೆನೆದ ನಂತರ ಒಟ್ಟಿಗೆ ರುಬ್ಬಿ, ಜೊತೆಗೆ ಹೆಚ್ಚಿಟ್ಟುಕೊಂಡ ಬೂದುಕುಂಬಳ ಸೇರಿಸಿ ರುಬ್ಬಿ. ಕಾವಲಿ ಬಿಸಿಗಿಟ್ಟು ದೋಸೆ ಹುಯ್ಯಿರಿ. ಕೆಂಪು ಚಟ್ನಿಯ ಜೊತೆಗೆ ಗರಿ ಗರಿಯಾದ ಕುಂಬಳಕಾಯಿ ದೋಸೆ ಸವಿಯಲು ಬಹುರುಚಿಯಾಗಿರುತ್ತದೆ.