Monday, October 27, 2025

ಪುನೀತ್ ರಾಜ್‌ಕುಮಾರ್ ಕನಸಿನ ‘ಅಪ್ಪು ಫ್ಯಾನ್‌ ಡಮ್’ ಆ್ಯಪ್ ಅನಾವರಣ, ದೇಶದಲ್ಲಿಯೇ ಮೊದಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಿ.ಪುನೀತ್ ರಾಜ್‌ಕುಮಾರ್ ಕನಸುಗಳನ್ನು ಸಾಕಾರಗೊಳಿಸಲು ನೂತನ ಆ್ಯಪ್ `ಅಪ್ಪು ಫ್ಯಾನ್ ಡಮ್’ ಅನಾವರಣಗೊಂಡಿದೆ.

ಆ್ಯಪ್, ಎಐ ತಂತ್ರಜ್ಞಾನದ ಮೂಲಕ ಅಭಿಮಾನಿಗಳನ್ನು ತಲುಪುವ ಸದುದ್ದೇಶದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಸಿದ್ಧವಾಗಿದೆ.

ಆ್ಯಪ್ ಲೋಕಾರ್ಪಣೆ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.

ಫ್ಯಾನ್‌ಡಮ್ ಆ್ಯಪ್ ಅಲ್ಲಿ ಅಪ್ಪು ಬಗ್ಗೇನೆ ಮಾಹಿತಿ ಸಿಗುತ್ತದೆ. ಇದು ದೇಶದಲ್ಲಿಯೇ ಮೊದಲು. ಇಲ್ಲಿವರೆಗೂ ಒಬ್ಬ ನಟನ ಬಗ್ಗೆ ಯಾವುದೇ ಆ್ಯಪ್ ಬಂದಿಲ್ಲ. ಆದರೆ, ಅಪ್ಪು ಬಗ್ಗೆ ಈಗೊಂದು ಆ್ಯಪ್ ಲಾಂಚ್ ಆಗಿದೆ. ಇದು ಅಪ್ಪು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. 

error: Content is protected !!