ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಕ್ಫ್ ಕಾಯ್ದೆಯ ಕುರಿತು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅವರ ಮೌನವನ್ನು ಪ್ರಶ್ನಿಸಿದ್ದಾರೆ.
“ಬಂಗಾಳ ಹೊತ್ತಿ ಉರಿಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಮೌನವಾಗಿದ್ದಾರೆ. ಅವರು ಗಲಭೆಕೋರರನ್ನು ‘ಶಾಂತಿಯ ಸಂದೇಶವಾಹಕರು’ ಎಂದು ಕರೆಯುತ್ತಾರೆ. ಜಾತ್ಯತೀತತೆಯ ಹೆಸರಿನಲ್ಲಿ, ಅವರು ಗಲಭೆಕೋರರಿಗೆ ಅಶಾಂತಿ ಸೃಷ್ಟಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಕಳೆದ ವಾರದಿಂದ ಇಡೀ ಮುರ್ಷಿದಾಬಾದ್ ಹೊತ್ತಿ ಉರಿಯುತ್ತಿದೆ, ಆದರೂ ಸರ್ಕಾರ ಮೌನವಾಗಿದೆ. ಇಂತಹ ಅರಾಜಕತೆಯನ್ನು ನಿಯಂತ್ರಣಕ್ಕೆ ತರಬೇಕು” ಎಂದು ಸಿಮ್ ಯೋಗಿ ಕಿಡಿಕಾರಿದ್ದಾರೆ.