‌ಭಗತ್‌ ಸಿಂಗ್‌ ಹುಟ್ಟೂರಿನಲ್ಲಿ ಪಂಜಾಬ್‌ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಟಲ್‌ ಡೆಸ್ಕ್:
ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಹುಟ್ಟೂರು ಖಟ್ಕರ್‌ ಕಾಲನ್‌ ಗ್ರಾಮದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ, ರಾಜಭವನದಲ್ಲಿ ಅಲ್ಲ ಎಂದು ಪಂಜಾಬ್‌ ನೂತನ ಮುಖ್ಯಮಂತ್ರಿಯಾಗಿ ಘೋಷಣೆಯಾಗಿರುವ ಭಗವಂತ್‌ ಸಿಂಗ್‌ ಮಾನ್‌ ಘೋಷಿಸಿಕೊಂಡಿದ್ದಾರೆ.
ಆಮ್‌ ಆದ್ಮಿ ಪಕ್ಷವು ಪಂಜಾಬ್‌ ನ 117 ವಿಧಾನಸಭಾ ಕ್ಷೇತ್ರಗಳಲ್ಲಿ91 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಭಗವಂತ್‌ ಸಿಂಗ್‌ ಮಾನ್‌ ೫೮,೨೦೬ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಂಗ್ರೂರ್‌ ನಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಅವರು ಕಾರ್ಯಕರ್ತರೊಂದಿಗೆ ಮಾತನಾಡಿದರು. ಪ್ರಮಾಣ ವಚನ ಸ್ವೀಕಾರ ದಿನಾಂಕ ಶೀಘ್ರವೇ ಘೋಷಿಸುತ್ತೇವೆ. ಇನ್ನು ಮುಂದೆ ಪಂಜಾಬ್‌ ಸರ್ಕಾರಿ ಕಚೇರಿಗಳಲ್ಲಿ ಭಗತ್‌ ಸಿಂಗ್‌ ಮತ್ತು ಬಾಬಾ ಸಾಹೇಬ್‌  ಅಂಬೇಡ್ಕರ್‌ ಭಾವಚಿತ್ರಗಳು ಮಾತ್ರವೇ ಇರುತ್ತವೆ ಎಂದು ಮಾನ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!