ಪಂಜಾಬ್​ ಸರಕಾರದಿಂದ ಬಜೆಟ್ ಮಂಡನೆ: ರಾಜ್ಯದಲ್ಲಿ ಮೊದಲ ಬಾರಿಗೆ ನಡೆಯಲಿದೆ ‘ಡ್ರಗ್ಸ್​ ಸೆನ್ಸಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಂಜಾಬ್​ ಸರಕಾರ ಇಂದು 2.36 ಲಕ್ಷ ಕೋಟಿ ರೂ ಗಾತ್ರದ ಬಜೆಟ್​ ಅನ್ನು ಮಂಡಿಸಿದೆ.

ರಾಜ್ಯದ ಹಣಕಾಸು ಸಚಿವ ಹರ್ಪಲ್​ ಸಿಂಗ್​ ಚೀಮಾ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.ಇದೇ ಮೊದಲ ಬಾರಿಗೆ ಡ್ರಗ್ಸ್​ ಸೆನ್ಸಸ್​ (ಮಾದಕದ್ರವ್ಯ ಜನಗಣತಿ) ನಡೆಸಲಾಗುವುದು ಎಂದು ಘೋಷಿಸಿದರು.

ಎಎಪಿ ನೇತೃತ್ವದ ಪಂಜಾಬ್​ ಸರ್ಕಾರ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸಲಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಲಾಗುವುದು ಎಂದರು.

2025-26ರ ಹಣಕಾಸು ವರ್ಷಕ್ಕೆ ಸಚಿವ ಚೀಮಾ 2,36,080 ಕೋಟಿ ಮೊತ್ತದ ಬಜೆಟ್​ ಮಂಡಿಸಿದರು. ಇದು ಬದಲಾವಣೆಯ ಪಂಜಾಬ್​ಗೆ ಮಾರ್ಗಸೂಚಿ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಭಾರತ ಮತ್ತು ಪಾಕ್​ ಗಡಿಯಲ್ಲಿ ಎರಡನೇ ಹಂತರ ರಕ್ಷಣೆಗೆ ಮುಂದಾಗುತ್ತಿದೆ. ಗಡಿಯಲ್ಲಿ ಭದ್ರತೆಗೆ ಮತ್ತಷ್ಟು ಒತ್ತು ನೀಡುವ ಸಲುವಾಗಿ ರಾಜ್ಯ ಸರ್ಕಾರ ಬಿಎಸ್‌ಎಫ್ ಜೊತೆಗೆ 5,000 ಗೃಹರಕ್ಷಕರನ್ನು ನಿಯೋಜಿಸಲಿದೆ. ಈ ಯೋಜನೆಯಲ್ಲಿ ಬಡವರು ಅಥವಾ ಶ್ರೀಮಂತರು, ನಗರ ಅಥವಾ ಗ್ರಾಮೀಣ ಎಂಬ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಭಾಗಿಯಾಗಬಹುದು ಎಂದರು.

ಸ್ಥಳೀಯ ಕ್ರೀಡೆಗಳಿಗಾಗಿ ಹಳ್ಳಿಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು. ತರಣ್ ತರಣ್ ಜಿಲ್ಲೆಯಲ್ಲಿ ಈಗಾಗಲೇ 87 ಆಟದ ಮೈದಾನಗಳನ್ನು ನಿರ್ಮಿಸಲಾಗಿದ್ದು, 3,000 ಒಳಾಂಗಣ ಜಿಮ್‌ಗಳನ್ನು ಸ್ಥಾಪಿಸಲಾಗುವುದು. ಪಂಜಾಬ್​ ಇತಿಹಾಸದಲ್ಲೇ ಮೊದಲ ಬಾರಿಗೆ 979 ಕೋಟಿ ರೂ.ಗಳನ್ನು ಕ್ರೀಡೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!