ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 2025ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ 17 ಅಂಕಗಳೊಂದಿಗೆ ತಂಡವು 11 ವರ್ಷಗಳ ಬಳಿಕ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಈ ಮಧ್ಯೆ ಫ್ರಾಂಚೈಸಿ ಮಧ್ಯೆ ವಿವಾದ ಉಂಟಾಗಿದ್ದು, ಪ್ರೀತಿ ಝಿಂಟಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ, ಮೋಹಿತ್ ಬರ್ಮನ್, ಮತ್ತು ನೆಸ್ ವಾಡಿಯಾ ನಡುವೆ ಕಾನೂನು ವಿವಾದ ಉದ್ಭವಿಸಿದೆ. ಪ್ರೀತಿ ಝಿಂಟಾ ಚಂಡೀಗಢ ನ್ಯಾಯಾಲಯದಲ್ಲಿ ಬರ್ಮನ್ ಮತ್ತು ವಾಡಿಯಾ ವಿರುದ್ಧ ದಾವೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಏಪ್ರಿಲ್ 21, ರಂದು ನಡೆದ ಕೆಪಿಹೆಚ್ ಡ್ರೀಮ್ ಕ್ರಿಕೆಟ್‌ನ ಸಾಮಾನ್ಯ ಸಭೆ (EGM) ವಿವಾದಕ್ಕೆ ಕಾರಣವಾಗಿದೆ. ಈ ಸಭೆಯಲ್ಲಿ ಮುನೀಶ್ ಖನ್ನಾ ಅವರನ್ನು ಹೊಸ ನಿರ್ದೇಶಕರಾಗಿ ನೇಮಿಸಲಾಯಿತು, ಆದರೆ ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಈ ನೇಮಕವನ್ನು ವಿರೋಧಿಸಿದ್ದರು. ಸಭೆಯು ಕಂಪನಿಯ ನಿಯಮಗಳು ಮತ್ತು ಕಂಪನೀಸ್ ಆಕ್ಟ್ 2013ರ ಅಡಿಯಲ್ಲಿ ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಝಿಂಟಾ ಆರೋಪಿಸಿದ್ದಾರೆ.
ಪ್ರೀತಿ ಝಿಂಟಾ ತಮ್ಮ ಆಕ್ಷೇಪಣೆಗಳನ್ನು ಏಪ್ರಿಲ್ 10ರಂದು ಇಮೇಲ್ ಮೂಲಕ ತಿಳಿಸಿದ್ದರೂ, ಮೋಹಿತ್ ಬರ್ಮನ್ ಮತ್ತು ನೆಸ್ ವಾಡಿಯಾ ಸಭೆಯನ್ನು ಮುಂದುವರೆಸಿದ್ದಾರೆ ಎಂದು ದೂರಿದ್ದಾರೆ.