ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. ಚಂಡೀಗಢದ ಮುಲ್ಲನಪುರದಲ್ಲಿ ನಡೆಯುತ್ತಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 101 ರನ್‌ಗಳಿಗೆ ಪಂಜಾಬ್ ಆಲೌಟ್ ಆಯಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ 6 ನೇ ಬಾರಿಗೆ ಅಲ್ಪ ಮೊತ್ತದ ಕೆಟ್ಟ ದಾಖಲೆ ಬರೆದಿದೆ.
2015 ರಲ್ಲಿ 13.4 ಓವರ್ ಮತ್ತು 2018ರಲ್ಲಿ ಆರ್‌ಸಿಬಿ ವಿರುದ್ಧ 88 ರನ್‌ಗೆ 15.1 ಓವರ್‌ಗೆ ಪಂಜಾಬ್ ಆಲೌಟ್ ಆಗಿತ್ತು. ಇಂದಿನ ರೋಚಕ ಪಂದ್ಯದಲ್ಲಿ ಪಂಜಾಬ್ ತಂಡ 14.1 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್ ಆಗಿದೆ.