ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಶ್ವಾದ್ಯಂತ ಪುಷ್ಪ 2 ಭರ್ಜರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪುಷ್ಪ 2 ಮೊದಲ ದಿನ ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.
ಇದರ ನಡುವೆ ಪುಷ್ಪ 2 ಥಿಯೇಟರ್‌ಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಚಿತ್ರತಂಡವನ್ನು ಬೇಸರಗೊಳಿಸಿದೆ. ಹೈದರಾಬಾದ್‌ನ ಸಂಧ್ಯ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಮೃತಪಟ್ಟರು.
ಅದೇ ರೀತಿ ಮುಂಬೈನ ಒಂದು ಥಿಯೇಟರ್‌ನಲ್ಲಿ ವಿಷಪ್ರಯೋಗ ನಡೆದಿದೆ. ಪುಷ್ಪ 2 ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರ ಮೇಲೆ ವಿಷಪೂರಿತ ಅನಿಲ ಸಿಂಪಡಿಸಲಾಗಿದೆ. ಬಾಂದ್ರಾದ ಗೇಟಿ ಗ್ಯಾಲಕ್ಸಿ ಥಿಯೇಟರ್‌ನಲ್ಲಿ ವಿರಾಮದ ನಂತರ ಈ ಘಟನೆ ನಡೆದಿದೆ.
ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ. ಬಳಿಕ ಸುಮಾರು 15-20 ನಿಮಿಷಗಳ ಕಾಲ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಥಿಯೇಟರ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತೆಲುಗು ರಾಜ್ಯಗಳಂತೆ ಪುಷ್ಪ 2 ಚಿತ್ರಕ್ಕೆ ಉತ್ತರ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುಷ್ಪ 2 ಹಿಂದಿ ಆವೃತ್ತಿ ಊಹೆಗೂ ಮೀರಿ ಗಳಿಕೆ ಕಾಣಲಿದೆ.
ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನಸೂಯ, ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.