CINE| ‘ಪುಷ್ಪ 2’ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ? ಶೂಟಿಂಗ್‌ನ ಫೋಟೋಗಳು ಲೀಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಲ್ಲು ಅರ್ಜುನ್, ಸುಕುಮಾರ್ ಕಾಂಬಿನೇಷನ್‌ನಲ್ಲಿ ತೆರೆಕಂಡ ಪುಷ್ಪ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ಸದ್ಯ ಪುಷ್ಪ 2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಆಗಾಗ ತಂಡ ಅಪ್ಡೇಟ್‌ ನೀಡುತ್ತಲೇ ಇದೆ. ಇದೀಗ ಈ ಸಿನಿಮಾದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಇರುವ ಪೋಸ್ಟರ್‌ಗಳು ವೈರಲ್‌ ಆಗುತ್ತಿವೆ.

ಇತ್ತೀಚೆಗಷ್ಟೇ ಪುಷ್ಪ 2 ಚಿತ್ರೀಕರಣದ ಕೆಲವು ಲೀಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಿನಿಮಾದ ಕಥೆ 2000ನೇ ಇಸವಿ ಆಗಿದ್ದು, ಆ ಕಾಲದಲ್ಲಿ ನಡೆದಿದ್ದ ದೃಶ್ಯವೊಂದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಲೀಕ್ ಆಗಿರುವ ಫೋಟೋಗಳಲ್ಲಿ ಪುಷ್ಪರಾಜ್ ಚಿರಂಜೀವಿ ಅಭಿಮಾನಿಯಾಗಿದ್ದು, ಇಂದ್ರ ಸಿನಿಮಾ ರಿಲೀಸ್ ವೇಳೆ ಥಿಯೇಟರ್ ಬಳಿ ಪುಷ್ಪರಾಜ್ ಯುವಸೇನೆ ಬ್ಯಾನರ್‌ ಹಾಕಿರುವುದನ್ನು ತೋರಿಸಲಾಗಿದೆ.

ಪುಷ್ಪ 2 ಸಿನಿಮಾದಲ್ಲಿ ಚಿರಂಜೀವಿ ʻಇಂದ್ರʼಸಿನಿಮಾವನ್ನು ರೆಫರೆನ್ಸ್ ಬಳಸುತ್ತಿದ್ದಾರಂತೆ. ಇಂದ್ರ ಸಿನಿಮಾದ ವೇಳೆ ಥಿಯೇಟರ್ ಗಳಲ್ಲಿ ಆಗುತ್ತಿದ್ದ ಗಲಾಟೆ, ಥಿಯೇಟರ್ ನಲ್ಲಿನ ಜನಜಂಗುಳಿಯನ್ನು ಸಿನಿಮಾದಲ್ಲಿ ತೋರಿಸಲಿದ್ದಾರೆ. ಇದರಿಂದ ಮೆಗಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!