ಹೊಸ ಪೀಳಿಗೆ ಯಾಂತ್ರಿಕ ಜೀವನದ ಈ ಕಾಲದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವುದು ಅನಿವಾರ್ಯವಾಗಿದೆ. ಊಟವಲ್ಲದೆ ಜೀರ್ಣಕ್ರಿಯೆಯಲ್ಲಿಯೂ ಉತ್ತಮ ಪರಿಣಾಮ ಉಂಟುಮಾಡಬಲ್ಲ ಒಂದು ಸರಳವಾದ ರೂಢಿ ಅಂದರೆ ಕೈಯಿಂದ ಊಟ ಮಾಡುವುದು. ಇತ್ತೀಚಿನ ಟ್ರೆಂಡ್ ನೋಡಿದರೆ, ಚಮಚ, ಫೋರ್ಕ್ ಬಳಕೆ ಹೆಚ್ಚಾಗುತ್ತಿದೆ. ಆದರೆ ಆರೋಗ್ಯ ತಜ್ಞರ ಅಭಿಪ್ರಾಯ ಪ್ರಕಾರ, ಕೈಗಳಿಂದ ಆಹಾರ ಸೇವಿಸುವುದರಿಂದ ಹಲವಾರು ಆರೋಗ್ಯಪೂರ್ಣ ಲಾಭಗಳನ್ನು ಪಡೆಯಬಹುದಾಗಿದೆ.
ಮೊದಲು, ಕೈ ಸ್ಪರ್ಶವೇ ಮೆದುಳಿಗೆ ಶಕ್ತಿಯ ಸಂಕೇತವನ್ನು ಒದಗಿಸುತ್ತದೆ.
ಕೈಯಿಂದ ತಿನ್ನುವಾಗ ಬೆರಳಿನ ತುದಿಗಳಲ್ಲಿರುವ ನರಗಳು ಆಹಾರದ ಉಷ್ಣತೆ, ತೇವಾಂಶ, ಮತ್ತು ಸ್ವಭಾವವನ್ನು ಅನುಭವಿಸುತ್ತವೆ. ಈ ಸೂಚನೆಗಳು ನೇರವಾಗಿ ಮೆದುಳಿಗೆ ತಲುಪುತ್ತವೆ. ಇದು ಜೀರ್ಣಕ್ರಿಯೆಗೆ ಸಿಗ್ನಲ್ ಕೊಡುತ್ತದೆ ಮತ್ತು ಆಹಾರವನ್ನು ಸರಿಯಾಗಿ ಜೀರ್ಣಿಸುವುದಕ್ಕೆ ಸಹಾಯವಾಗುತ್ತದೆ.
ಚಮಚದಿಂದ ತಿನ್ನುವ ವೇಗ, ಜೀರ್ಣಕ್ರಿಯೆಗೆ ಹಾನಿಕಾರಕ.
ಚಮಚ ಅಥವಾ ಫೋರ್ಕ್‌ನಿಂದ ತಿನ್ನುವ ವ್ಯಕ್ತಿಗಳು ಸಾಮಾನ್ಯವಾಗಿ ವೇಗವಾಗಿ ತಿನ್ನುತ್ತಾರೆ. ಇದು ದೇಹದ ಒಳಗಿನ ಸಕ್ಕರೆ ಮಟ್ಟವನ್ನು ಏರಿಸುತ್ತವೆ ಮತ್ತು ಕೆಲವೊಮ್ಮೆ ಮಧುಮೇಹದ ನಿರ್ಧಿಷ್ಟ ಕಾರಣವನ್ನೂ ಕೊಡಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಕೈಗಳಲ್ಲಿರುವ ಸೌಮ್ಯ ಬ್ಯಾಕ್ಟೀರಿಯಾ ಸಹಾಯಕ.
ನಮ್ಮ ಕೈಗಳ ಮೇಲೆ ಕೆಲವೊಂದು ಉತ್ತಮ ಬ್ಯಾಕ್ಟೀರಿಯಾಗಳು ಇರುತ್ತವೆ. ಸರಿಯಾಗಿ ಕೈ ತೊಳೆಯುವ ಶಿಷ್ಟಾಚಾರವನ್ನು ಪಾಲಿಸಿಕೊಂಡು, ಕೈಗಳಿಂದ ತಿನ್ನುವುದರಿಂದ ಇವು ಹೊಟ್ಟೆ ಹಾಗೂ ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತವೆ.
ಊಟದ ಮೇಲೆ ಏಕಾಗ್ರತೆ ಹೆಚ್ಚುತ್ತದೆ.
ಕೈಯಿಂದ ತಿನ್ನುವಾಗ ಮನಸ್ಸು ಆಹಾರದತ್ತ ಸೆಳೆಯುತ್ತದೆ. ಇದರಿಂದ ಮೆದುಳು ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಆಹಾರವನ್ನು ಸರಿಯಾಗಿ ಜೀರ್ಣಿಸಲು ಸಿದ್ಧವಾಗುತ್ತದೆ.
ಚಿಕ್ಕ ವ್ಯಾಯಾಮದ ರೂಪವೂ ಇದಾಗುತ್ತದೆ.
ಬೆರಳಗಳಿಂದ ಆಹಾರ ತೆಗೆದು, ಬಾಯಿಗೆ ಇಡುವ ಕ್ರಿಯೆಯು ಸಹ ಮೃದುವಾದ ವ್ಯಾಯಾಮದಂತೆಯೇ ಕಾರ್ಯನಿರ್ವಹಿಸುತ್ತದೆ.
ಇದು ಸರಳವಾದ ವಿಷಯವಾದರೂ, ಕೈಯಿಂದ ಊಟ ಮಾಡುವ ಸಂಸ್ಕೃತಿ ಆರೋಗ್ಯ ಮತ್ತು ಮನಶ್ಶಾಂತಿಯ ದೃಷ್ಟಿಯಿಂದ ಬಹುಮುಖ್ಯ. ಅದು ನಿಮಗೆ ಒಳ್ಳೆಯ ಆರೋಗ್ಯದತ್ತ ಮುನ್ನಡೆಸಬಹುದು.